×
Ad

ದುಬೈ: ಉಸ್ತಾದ್ ರೆಸ್ಟೋರೆಂಟ್‌ನಲ್ಲಿ ಸ್ಫೋಟ

Update: 2016-06-22 15:14 IST

ದುಬೈ,ಜೂನ್ 22: ದುಬೈಯ ಕರಾಮದಲ್ಲಿ ಕೇರಳೀಯರ ಒಡೆತನದ ಉಸ್ತಾದ್ ರೆಸ್ಟೋರೆಂಟ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಸ್ಥಳೀಯರು ಕಂಪಿಸುವಂತೆ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಅಡುಗೆ ಅನಿಲ ಸಂಪರ್ಕದ ಕೊಳವೆಯಲ್ಲಿ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಹೊಟೇಲ್ ಸಂಪೂರ್ಣ ನಾಶವಾಗಿದ್ದರೂ ಯಾರಿಗೂ ಅಪಾಯವಾಗಿಲ್ಲ. ರಮಝಾನ್ ತಿಂಗಳು ಆಗಿರುವುದು ಮತ್ತು ಬೆಳಗ್ಗಿನ ಹೊತ್ತುಸ್ಫೋಟ ಸಂಭವಿಸಿದ್ದರಿಂದ ಹೊಟೇಲ್‌ನಲ್ಲಿ ಯಾರೂ ಇರಲಿಲ್ಲ. ಹೊಟೇಲ್‌ಗೆ ಮೀನು ತಂದು ಕೊಟ್ಟು ಹೋಗುತ್ತಿದ್ದಾತನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹತ್ತಿರದ ಅಂಗಡಿಗಳಿಗೆ, ಕಟ್ಟಡದ ಮುಂದೆ ನಿಲ್ಲಿಸಿದ ಕಾರುಗಳಿಗೆ ಹಾನಿಯಾಗಿವೆ. ಎದುರಿನ ಸ್ಟ್ರೀಟ್‌ನಲ್ಲಿ ಪೆಟ್ರೋಲ್ ಬಂಕ್ ಇದ್ದು ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಯುತ್ತಿತ್ತು ಅಪಾಯವೇನು ಆಗಿಲ್ಲ. ಹತ್ತು ಲಕ್ಷ ದಿರ್‌ಹಮ್ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News