×
Ad

ಅಬುಧಾಬಿ: ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರೀ ಜನಸಮೂಹ!

Update: 2016-06-22 17:51 IST

ಅಬುಧಾಬಿ ಜೂನ್ 22: ಅಂತಾರಾಷ್ಟ್ರೀಯ ಯೋಗ ದಿನಜೂನ್ 21ರಂದು ಉಮ್ಮುಲ್ ಇಮಾರತ್ ಪಾರ್ಕ್‌ನಲ್ಲಿ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು, ವಿವಿಧ ದೇಶಗಳ ಜನರು ಭಾಗವಹಿಸಿದ್ದರು. ಯೋಗದ ಪ್ರಾಮುಖ್ಯತೆಯ ಕುರಿತು ಪರಿಣತರು ಉಪನ್ಯಾಸ ನೀಡಿದರು. ಯೋಗದ ಕುರಿತು ವಿವರಣೆಯೂ ಇತ್ತು. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನೂ ಒದಗಿಸಲಾಗಿತ್ತು. ಸಾಂಸ್ಕೃತಿಕ ಸಚಿವ ಶೇಕ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್. ಸಹಿಷ್ಣುತಾ ವಿಷಯಗಳ ಸಚಿವೆ ಶೇಕ್ ಲುಬ್ನಾ ಅಲ್ ಖಾಸಿಮಿ, ಯುಎಇಯ ಭಾರತೀಯ ರಾಯಭಾರಿ ಟಿ.ಪಿ. ಸೀತಾರಾಂ ಮುಂತಾದವರು ಭಾಗವಹಿಸಿದ್ದರು.

ಯೋಗ ಘೋಷಿಸಿದ ಸಮಯಕ್ಕಿಂತ ಸ್ವಲ್ಪ ತಡವಾಗಿ ಆರಂಭವಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಸಾರ್ವಜನಿಕರು ಭಾರೀ ಸಂಖೆಯಲ್ಲಿ ಭಾಗವಹಿಸಿದ್ದರು. ಯೋಗಕ್ಕೆ ಬಂದವರಿಗೆ ಸಂಬಂಧಿಸಿದ ಬಟ್ಟೆಬರೆಗಳನ್ನು ಸಂಘಟಕರು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News