×
Ad

ಗಲ್ಫ್ ದೇಶಗಳಿಂದ ಆಲಿವ್ ಎಣ್ಣೆ ತರುವವರು, ತರಲು ಹೇಳುವವರು ಮೊದಲು ಇದನ್ನೊಮ್ಮೆ ಓದಿಕೊಳ್ಳಿ !

Update: 2016-06-24 14:10 IST

ದುಬೈ,ಜೂ.24: ಗಲ್ಫ್ ದೇಶಗಳಿಂದ ಆಲಿವ್ ಎಣ್ಣೆ ತರುವವರು ಹಾಗೂ ಅಲ್ಲಿಂದ ಬರುವವರಲ್ಲಿ ಈ ಎಣ್ಣೆ ತರಲು ಹೇಳುವವರಿಗೆ ಇಲ್ಲೊಂದು ಎಚ್ಚರಿಕೆಯ ಪಾಠವಿದೆ.

ಇತ್ತೀಚೆಗೆ ಕರಾಮದಲ್ಲಿ ಉದ್ಯೋಗದಲ್ಲಿರುವ ಸಿದ್ಧೀಖ್ ಜಮಾಲ್ ಎಂಬ ಕೇರಳದ ತಿರುವನಂತಪುರಂ ಮೂಲದ ವ್ಯಕ್ತಿ ತಮ್ಮ ತವರೂರಿಗೆ ತೆರಳಲು ದುಬೈ ವಿಮಾನ ನಿಲ್ದಾಣದ ಎರಡನೆ ಟರ್ಮಿನಲ್‌ಗೆ ಬುಧವಾರ ರಾತ್ರಿ ಆಗಮಿಸಿದ್ದರು. ಅವರು ಏರ್ ಇಂಡಿಯಾ ವಿಮಾನವೊಂದರಲ್ಲಿ ಟಿಕೆಟ್‌ನ್ನು ಎಂಟು ತಿಂಗಳುಗಳ ಹಿಂದೆಯೇ ಕಾಯ್ದಿರಿಸಿದ್ದರು.

ಚೆಕ್-ಇನ್, ಸೆಕ್ಯುರಿಟಿ ತಪಾಸಣೆ ಮುಂತಾದವುಗಳನ್ನು ಮುಗಿಸಿ ಅವರು ಬೋರ್ಡಿಂಗ್ ಗೇಟ್ ಬಳಿ ಸಮಯಕ್ಕೆ ಸರಿಯಾಗಿ, ಅಂದರೆ ವಿಮಾನ ಹೊರಡಲು ಇನ್ನೂ 45 ನಿಮಿಷಗಳಿರುವಾಗಲೇ ಬಂದಿದ್ದರು. ಆಗ ಅಲ್ಲಿದ್ದ ಸಿಬ್ಬಂದಿಯೊಬ್ಬರು ಸಿದ್ಧೀಖ್ ಅವರ ಹೆಸರು ಕೇಳಿ ಅವರ ಬ್ಯಾಗಿನಲ್ಲಿ ಏನಿದೆಯೆಂದು ಕೇಳಿದರು. ಅದಕ್ಕೆ ಅವರು ಅದರಲ್ಲಿ ವಿಶೇಷವಾದುದೇನೂ ಇಲ್ಲವೆಂದು ಹೇಳಿದರೂ, ಆ ವಿಮಾನ ನಿಲ್ದಾಣದ ಸಿಬ್ಬಂದಿ ಅದರಲ್ಲಿ ಎಣ್ಣೆ ಏನಾದದೂ ಇದೆಯೇ ಎಂದು ಕೇಳಿದಾಗ ಸಿದ್ಧೀಖ್ ಅದರಲ್ಲಿ ನಾಲ್ಕು ಲೀಟರ್ ಆಲಿವ್ ಎಣ್ಣೆ ಇದೆಯೆಂದು ಹೇಳಿದರು.

ಅವರನ್ನು ಅಲ್ಲಿ ಅರ್ಧ ಗಂಟೆ ಕಾಯಿಸಿ ಬಳಿಕ ಸೆಕ್ಯುರಿಟಿ ಕೋಣೆಯೊಳಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರು ಎಣ್ಣೆಯ ಬಾಟಲಿ ಹೊರತೆಗೆದು ಅದನ್ನು ಅಲ್ಲಿಯೇ ಬಿಟ್ಟು ಹೊರ ಬರುವಷ್ಟರಲ್ಲಿ ವಿಮಾನ ಹೊರಟಾಗಿತ್ತು.

ಅವರ ಈ ಸಮಸ್ಯೆಗೆ ಕಾರಣವಿದೆ. ದುಬೈ ವಿಮಾನದಲ್ಲಿ ಭದ್ರತಾ ತಪಾಸಣೆ ಗರಿಷ್ಠವಾಗಿದ್ದು ಸುರಕ್ಷಾ ಕಾರಣಗಳಿಗಾಗಿ ಇಷ್ಟೊಂದು ಪ್ರಮಾಣದ ಆಲಿವ್ ಎಣ್ಣೆಯನ್ನು ವಿಮಾನದಲ್ಲಿ ಪ್ರಯಾಣಿಸುವಾಗ ಕೊಂಡುಹೋಗಲು ಅನುಮತಿಯಿಲ್ಲವಾಗಿದೆ. ಈ ವಿಚಾರ ಹಲವರಿಗೆ ತಿಳಿಯದಾಗಿದ್ದು ಇಂತಹ ಸಮಸ್ಯೆಗಳನ್ನು ಪ್ರಯಾಣಿಕರು ಎದುರಿಸಿದ್ದು ಇದೇ ಮೊದಲ ಬಾರಿಯಲ್ಲ, ಎಂದು ನಿಲ್ದಾಣದ ಅಧಿಕಾರಿಗಳು ಹೇಳುತ್ತಾರೆ.

ಹೀಗೆ ತಮ್ಮ ವಿಮಾನ ತಪ್ಪಿ ಹೋದ ಕಾರಣ ಏರ್ ಇಂಡಿಯಾ ಅಧಿಕಾರಿಗಳು ಸಿದ್ಧೀಖ್ ಅವರಿಗೆ ಗುರುವಾರ ರಾತ್ರಿಯ ವಿಮಾನದಲ್ಲಿ ತಿರುವನಂತಪುರಂಗೆ ಪ್ರಯಾಣಿಸುವ ಅವಕಾಶವೊದಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News