×
Ad

ರಿಯಾದ್ : ತಂದೆ ತಾಯಿಯನ್ನು ಬರ್ಬರವಾಗಿ ಕೊಂದ ಅವಳಿ ಸೋದರರು

Update: 2016-06-24 15:04 IST

ರಿಯಾದ್ , ಜೂ. 24  : ಅವಳಿ ಸೋದರರು ತಮ್ಮ ತಂದೆ - ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿ, ಸೋದರನನ್ನು ಗಂಭೀರವಾಗಿ ಗಾಯಗೊಳಿಸಿರುವ ಅಮಾನುಷ ಘಟನೆ ರಿಯಾದ್ ನ ಹಮ್ರಾ ಎಂಬಲ್ಲಿ ಶುಕ್ರವಾರ ನಡೆದಿದೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಈ ಅವಳಿ ಸೋದರರನ್ನು ಪೊಲೀಸರು ಬಂಧಿಸಿದ್ದಾರೆ. 

ಮೊದಲು ತಮ್ಮ ಸೋದರನನ್ನು ಹಿಂಬಾಲಿಸಿ ಹೋಗಿ ಮನೆಯ ತಾರಸಿಯಲ್ಲಿ ಹಲವು ಬಾರಿ ಇರಿದಿದ್ದಾರೆ. ಬಳಿಕ ತಂದೆಯನ್ನು ಮತ್ತೆ ತಾಯಿಯನ್ನು ಭೀಕರವಾಗಿ ಇರಿದಿದ್ದಾರೆ. ಸೋದರ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾನೆ. ಆದರೆ ತಂದೆ, ತಾಯಿ ಅಸುನೀಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News