ಬಹ್ರೈನ್: ಮರ್ಕಝುಲ್ ಹುದಾ ಬಹರೈನ್ ಸಮಿತಿಯ ಮಹಾಸಭೆ
ಬಹ್ರೈನ್, ಜೂ.24: ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬಹ್ರೈನ್ ಸಮಿತಿಯ ಅಧ್ಯಕ್ಷರಾಗಿ ಜಮಾಲುದ್ದೀನ್ ವಿಟ್ಲ ಪುನರಾಯ್ಕೆಗೊಂಡಿದ್ದಾರೆ.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸಂ ಝೈನಿ ಕಾಮಿಲ್ರ ಅಧ್ಯಕ್ಷತೆಯಲ್ಲಿ ಮನಾಮ ಕೆಸಿಎಫ್ ಸೆಂಟರ್ನಲ್ಲಿ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸುಳ್ಯ, ಕೋಶಾಧಿಕಾರಿಯಾಗಿ ಎಸ್.ಎಂ ಫಾರೂಕ್ ಕುಂಬ್ರ ,ಉಪಾಧ್ಯಕ್ಷರಾಗಿ ಬಶೀರ್ ಕಾರ್ಲೆ ಸುಳ್ಯ, ಫಝಲ್ ಸುರತ್ಕಲ್, ಇಸ್ಮಾಯೀಲ್ ತಲಪಾಡಿ, ಅಬ್ದುಲ್ ಕರೀಂ ತಲಪಾಡಿ, ಕಾರ್ಯದರ್ಶಿಗಳಾಗಿ ಸುಹೈಲ್ ಸಿ.ಸಿ ರೋಡ್, ಹಾರಿಸ್ ಸಂಪ್ಯ, ಹಾರಿಸ್ ಒಕ್ಕೆತ್ತೂರು, ಸಿದ್ದೀಕ್ ಎಣ್ಮೂರು, ಸಂಚಾಲಕರಾಗಿ ಅಬ್ದುಲ್ ಮಜೀದ್ ಝುಹ್ರಿ ಸುಳ್ಯ, ರಿಯಾಝ್ ಸುಳ್ಯ, ಅಶ್ರಫ್ ಕಿನ್ಯ, ಸೈಯದ್ ರೆಂಜ, ಹನೀಫ್ ಕಿನ್ಯ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಗೆ ಮಜೀದ್ ಮಾದಾಪುರ, ಮುಹ್ಸಿನ್ ಸುಳ್ಯ, ಸೂಫಿ ಪೈಂಬಚ್ಚಾಲ್, ನೌಶಾದ್ ಉಳ್ಳಾಲ, ಸಮದ್ ಉಜಿರಬೆಟ್ಟು, ಮನ್ಸೂರು ರೆಂಜಾಡಿ, ಅತಾವುಲ್ಲಾ ಹೈಫಾ ಸುಳ್ಯ, ಶಾಫಿ ಕಬಕ, ಝಕರಿಯಾ ಎಣ್ಮೂರು, ನಯಾಝ್ ಮಡಿಕೇರಿ, ಶಾಫಿ ಕಂಬಳಬೆಟ್ಟು, ಖಲಂದರ್ ಕಕ್ಕೆಪದವು, ಅಬ್ದುರ್ರಶೀದ್ ಅಡ್ಯಾರ್, ಅಬ್ದುಲ್ ಶಕೀರ್ ಕೆ.ಸಿ. ರೋಡ್ ಇವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಮಂಡಳಿಗೆ ಅಲಿ ಮುಸ್ಲಿಯಾರ್ ಕೊಡಗು,ಅಬೂಬಕರ್ ಮಾದಾಪುರ, ಹನೀಫ್ ಖಾಸಿಮಿ ಬಂಗಾಡಿ, ಫಕ್ರುದ್ದೀನ್ ಹಾಜಿ ಪೈಂಬಚ್ಚಾಲ್, ಸಲೀಂ ತಲಪಾಡಿ ರಫಾ,ಉಸ್ಮಾನ್ ಸಂಪ್ಯರನ್ನು ನೇಮಕ ಮಾಡಲಾಯಿತು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಎಸ್.ಎಂ. ಫಾರೂಕ್ ಕುಂಬ್ರ ಸಭೆಯನ್ನು ಉದ್ಘಾಟಿಸಿದರು. ಕೆಸಿಎಫ್ನ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಂಪ್ಯ, ಸುಳ್ಯ ಅಸೋಸಿಯೇಶನ್ನ ಅಧ್ಯಕ್ಷ ಬಶೀರ್ ಕಾರ್ಲೆ ಮಾತನಾಡಿ ಶುಭಹಾರೈಸಿದರು.
ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನೌಶಾದ್ ಉಳ್ಳಾಲ ಸ್ವಾಗತಿಸಿ, ಅಝೀಝ್ ಸುಳ್ಯ ವಂದಿಸಿದರು.ಸಿದ್ದೀಕ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.