×
Ad

ದಮ್ಮಾಮ್: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ದಮ್ಮಾಮ್ ವಲಯದ ವತಿಯಿಂದ ಇಫ್ತಾರ್ ಸಂಗಮ

Update: 2016-06-25 23:49 IST

ದಮ್ಮಾಮ್, ಜೂ.25: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್,ಮಂಜನಾಡಿ ಇದರ ವತಿಯಿಂದ ಡಿಸೆಂಬರ್ 2 ರಂದು ನಡೆಯುವ ಫ್ಯಾಮಿಲೀ ಮೀಟ್ನ ಪ್ರಚಾರ ಸಭೆ ಮತ್ತು ಇಫ್ತಾರ್ ಮೀಟ್ ಕಾರ್ಯಕ್ರಮವು ದಮ್ಮಾಮ್‌ನ ಹೋಟೆಲ್ ಪ್ಯಾರಗನ್ನಲ್ಲಿ ನಡೆಯಿತು.

ಮುಖ್ಯ ಪ್ರಭಾಷಣಕಾರರಾಗಿ ಅಗಮಿಸಿದ ಝೈನುಲ್ ಆಬಿದೀನ್ ಝುಹ್ರಿ ಮಾತನಾಡಿ, ಅಧಿಕ ಸಂಪತ್ತು ಮತ್ತು ಆಡಂಬರದ ಜೀವನದಿಂದ ಮಾನಸಿಕ ನೆಮ್ಮದಿ ಸಾದ್ಯವಿಲ್ಲ. ಬದಲಾಗಿ ಬಡ ಹಾಗೂ ಯತೀಂ ಮಕ್ಕಳಿಗೆ ಮಾಡುವ ಸೇವೆ ಮತ್ತು ದಾನಧರ್ಮದಿಂದ ಜೀವನವನ್ನು ಯಶಸ್ವಿ ಗೊಳಿಸಲು ಸಾಧ್ಯ ಎಂದು ಕರೆ ನೀಡಿದರು. ಅಬೂಬಕ್ಕರ್ ಮುಸ್ಲಿಯಾರ್ರ ನೇತೃತ್ವದಲ್ಲಿ ಸ್ವಲಾತ್ ಮತ್ತು ಝಿಕ್ರ್ ನಡೆಯಿತು.

ಕಾರ್ಯಕ್ರಮವನ್ನು ಜಾಮಿಯ ಸ ಅದಿಯಾ ದಮ್ಮಾಮ್ನ ಹಿರಿಯ ವಿದ್ವಾಂಸ ಯೂಸುಫ್ ಸಅದಿ ಅಯ್ಯಂಗೇರಿ ಉದ್ಘಾಟಿಸಿದರು. ಫ್ಯಾಮಿಲಿ ಮೀಟ್ನ ಚೇರ್ಮನ್‌ಎನ್.ಎಸ್. ಅಬ್ದುಲ್ಲಾ ಅವರು ಹಿರಿಯ ಕೊಡುಗೈ ದಾನಿ ಸೌದ್ ಸುರಲ್ಪಾಡಿಗೆ ಆಮಂತ್ರಣ ನೀಡುವ ಮೂಲಕ ಫ್ಯಾಮಿಲಿ ಮೀಟ್ನ ಪ್ರಚಾರಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ವಲಯಾಧ್ಯಕ್ಷ ಝ್ಝುದ್ದೀನ್ ಮುಸ್ಲಿಯಾರ್, ವಲಯ ಗೌರವಾಧ್ಯಕ್ಷ ಬಶೀರ್ ತೋಟಾಲ್, ಫ್ಯಾಮಿಲಿ ಮೀಟ್ನ ಕೋಶಾಧಿಕಾರಿ ಬಶೀರ್ ಕೈಕಂಬ, ವಲಯ ಕೋಶಾಧಿಕಾರಿ ಇಸ್ಮಾಯೀಲ್ ಪೊಯ್ಯಲ್, ದಮ್ಮಾಮ್ ಘಟಕ ಅಧ್ಯಕ್ಷ ಖಾಸಿಂ ಅಡ್ಡೂರ್, ಅಲ್ ಮದೀನ ಅಲ್ ಕೋಬಾರ್ ಘಟಕದ ಅಧ್ಯಕ್ಷ ಅಶ್ರಫ್ ಮದಕ, ದಮ್ಮಾಮ್ ಘಟಕದ ಕಾರ್ಯದರ್ಶಿ ಉಸ್ಮಾನ್ ಮಂಜನಾಡಿ, ಹಿರಿಯರಾದ ಉಮರ್ ರೋಯಲ್, ಕೆಸಿಎಫ್ ರಾಷ್ಟ್ರೀಯ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಝೊನ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ತೈಬಾ ಉಮ್ರಾದ ಮ್ಯಾನೇಜರ್ ಅಶ್ರಫ್ ಸಖಾಫಿ ಪರ್ಪುಂಜೆ, ಹಿರಿಯರಾದ ಹನೀಫ್ ನಾಟೆಕಲ್, ಅನ್ಸಾರಿ ಕಾನ, ಅಬ್ದುಲ್ ಖಾದರ್ ಸಕಲೇಶ್ಪುರ, ಶಕೀಲ್ ಅಹ್ಮದ್, ಮುಹಮ್ಮದ್ ಹಸನ್ ಮುಡುತೋಟ, ಸೈಯದ್ ಬಾವ, ಬಾವಕ ಮಂಜೇಶ್ವರ ಇನ್ನಿತರರು ಉಪಸ್ಥಿತರಿದ್ದರು.

ಉವೈಸ್ ಉಸ್ಮಾನ್ ಕಿರಾಅತ್ ಪಠಿಸಿದರು. ಫ್ಯಾಮಿಲಿ ಮೀಟ್ನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ಸ್ವಾಗತಿಸಿದರು. ಮುಹಮ್ಮದ್ ಮಲೆಬೆಟ್ಟು ವಂದಿಸಿದರು. ಇಕ್ಬಾಲ್ ಮಲ್ಲೂರ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News