×
Ad

ದುಬೈ: ಅಲ್ ಅಮೀನ್ ಫ್ರೆಂಡ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಇಫ್ತಾರ್ ಕೂಟ

Update: 2016-06-27 11:00 IST

ದುಬೈ, ಜೂ.27: ಅಲ್ಅಮೀನ್ ಫ್ರೆಂಡ್ಸ್ ಡಿ.ಕೆ. ಮತ್ತು ಕೆ.ಎಸ್.ಡಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಅಲ್ ರಿಗ್ಗ ಮೆಟ್ರೋ ಸ್ಟೇಷನ್ ಹತ್ತಿರವಿರುವ ಶಾಂಗ್ರಿಲಾ ಹೋಟೆಲ್ ಸಮೀಪದಲ್ಲಿ ಇಫ್ತಾರ್ ಕೂಟ ನಡೆಯಿತು.

ಇಫ್ತಾರ್ ಕೂಟಕ್ಕೆ ಮುನ್ನ ಅಲ್ ಅಮೀನ್ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಮಿತಿಯ ಮುಂದಿನ ಕಾರ್ಯಕ್ರಮಗಳ ಕುರಿತು ಮತ್ತು ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ ನಡೆಸುವ ಬಗ್ಗೆ ಚರ್ಚೆ ನಡೆಯಿತು.

ಅಲ್ ಅಮೀನ್ ಅಧ್ಯಕ್ಷ ಸಫ್ವಾನ್ ಕೆಂಪಿ, ಪ್ರಧಾನ ಕಾರ್ಯದರ್ಶಿ ಸಮೀರ್ ಕಡವಿನಬಾಗಿಲು, ಸಂಚಾಲಕ ಶಂಸುದ್ದೀನ್ ಪಿಲಿಗೂಡು, ಕೋಶಾಧಿಕಾರಿ ಕಬೀರ್, ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಮಠ, ಮಕ್ಷುಧ್ ಎಲೈಟ್, ನಿಯಾಜ್ ಉಪ್ಪಳ, ಇರ್ಷಾದ್ ಎಲೈಟ್, ಮುಸ್ತಫಾ ಪೊರುಂಕಾಜೆ, ಮುದಸ್ಸಿರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News