ದಮ್ಮಾಮ್‌ನಲ್ಲಿ ಮನೆಗೆ ಬೆಂಕಿ: ವಯೋವೃದ್ಧ ಮೃತ್ಯು, ಓರ್ವನಿಗೆ ಗಾಯ
Update: 2016-07-01 15:20 IST
ದಮ್ಮಾಮ್, ಜುಲೈ1: ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಬ್ಬರು ಗಾಯಗೊಂಡು ಓರ್ವ ಸೌದಿ ಪ್ರಜೆ ಮೃತರಾದ ಘಟನೆ ವರದಿಯಾಗಿದೆ. ಬುಧವಾರ ನಗರದ ವಾಸ ಕೇಂದ್ರವೊಂದರಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು ಎಂಬತ್ತು ವಯಸ್ಸಿನ ವೃದ್ಧ ವ್ಯಕ್ತಿ ಹೊಗೆ ಸೇವಿಸಿ ಮೃತರಾಗಿದ್ದಾರೆ.ಮನೆಯೊಳಗಿದ್ದ 27 ವರ್ಷ ವಯಸ್ಸಿನ ಯುವಕನ ಕೈಗೆ ಸುಟ್ಟಗಾಯಗಳಾಗಿವೆ.ರೆಡ್‌ಕ್ರೆಸೆಂಟ್ ಆಸ್ಪತ್ರೆಗೆ ಯುವಕನನ್ನು ಸೇರಿಸಲಾಗಿದೆ ಎಂದು ಸಿವಿಲ್ ಡಿಫೆನ್ಸ್ ವಕ್ತಾರ ಕರ್ನಲ್ ಮನ್ಸೂರ್ ಅಲ್‌ದೊಸಾರಿ ತಿಳಿಸಿದ್ದಾರೆ. ಬೆಂಕಿ ಆಕಸ್ಮಿಕಕ್ಕೆ ಕಾರಣವೇನೆಂದು ಪತ್ತೆಹಚ್ಚುವ ಪ್ರಯತ್ನ ಆರಂಭವಾಗಿದೆ.