ರಿಯಾದ್: ಕೆಲಸವಿಲ್ಲದೆ ಜರ್ಜರಿತ ತೆಲಂಗಾಣದ ಸಂತಯ್ಯಗೆ ಆಶ್ರಯ ನೀಡಿದ ಮಸೀದಿ ಇಮಾಮ್
ರಿಯಾದ್,ಜುಲೈ1: ಕೆಲಸವಿಲ್ಲದೆ ಮಾನಸಿಕವಾಗಿ ಜರ್ಜರಿತರಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ತೆಲಂಗಾಣದ ಕೃಷ್ಣ ನಗರದ ಸಂತಯ್ಯ ಗೋದಾರಿಗೆ 490 ಬತ್ಹಾದ ಮಸೀದಿ ಮತ್ತು ಮಸೀದಿಯ ಇಮಾಮ್ ಆಶ್ರಯ ನೀಡಿದ್ದಾರೆ. ಬತ್ಹಾ ಕಮರ್ಶಿಯಲ್ ಸೆಂಟರ್‌ಗೆ ಸಮೀಪದ ಮಸೀದಿಯ ಒಳಗೆ, ಹೊರಗೆ, ಹೀಗೆ ಒಂದು ವಾರಗಳಿಂದ ಸಂತಯ್ಯ ದಿನಕಳೆಯುತ್ತಿದ್ದರು. ಕಟ್ಟಡ ನಿರ್ಮಾಣದ ವೇಳೆ ಸಂಭವಿಸಿದ್ದ ಅವಘಡದಲ್ಲಿ ಗಾಯಗೊಂಡು ತುಂಬ ದಿವಸಗಳು ಆಸ್ಪತ್ರೆಯಲ್ಲಿದ್ದು ಬಳಿಕ ಅವರು ಸ್ಪೋನ್ಸರ್ ಬಳಿಗೆ ಹೋಗದೆ ಬೀದಿಯಲ್ಲಿ ಅಲೆದಾಡುತ್ತಿದ್ದರು. ಮಸೀದಿಯಲ್ಲಿ ದಿನಕಳೆಯುತ್ತಿರುವುದನ್ನು ನೋಡಿ ಮಸೀದಿ ಇಮಾಮ್ ಆಶ್ರಯ ನೀಡಿದ್ದಾರೆ.
2015 ಎಪ್ರಿಲ್ ಹದಿನೈದಕ್ಕೆ ಹೌಸ್ ಡ್ರೈವರ್‌ವೀಸಾದಲ್ಲಿ ರಿಯಾದ್‌ಗೆ ಬಂದಿದ್ದ ಸಂತಯ್ಯಗೆ ಡ್ರೈವರ್ ಕೆಲಸ ನೀಡದೆ ಕಟ್ಟಡ ನಿರ್ಮಾಣದಲ್ಲಿ ಕೆಲಸ ನೀಡಲಾಗಿತ್ತು. ಕೆಲಸದ ಸ್ಥಳದಲ್ಲಿ ಒಮ್ಮೆ ಗಾಯಗೊಂಡಿದ್ದ ಅವರನ್ನು ರಿಯಾದ್‌ನ ಆಸ್ಪತ್ರೆಗೆಸೇರಿಸಲಾಗಿತ್ತು.
ಗಾಯವಾಸಿಯಾಗಿ ಹೊರಬಂದ ಮೇಲೆ ಸಂತಯ್ಯ ಪ್ರಾಯೋಜಕರ ಬಳಿ ಹೋಗದೆ ಅಲೆದಾಡುತ್ತಿದ್ದರು. ಆಸ್ಪತ್ರೆಯಿಂದ ವ್ಯಕ್ತಿ ತಲೆತಪ್ಪಿಸಿಕೊಂಡಿದ್ದಾನೆ ಎಂದು ಜವಾಝದಲ್ಲಿ ದೂರು ದಾಖಲಾಗಿತ್ತು. ಆಹಾರ ಕೆಲಸ ಯಾವುದೂ ಇಲ್ಲದೆ ಅಲೆದಾಡಿದ ಸಂತಯ್ಯ ಮನೋಸ್ಥಿಮಿತ ಕಳಕೊಂಡಿದ್ದರು. ಭಾರತೀಯ ರಾಯಭಾರ ಕಚೇರಿಗೆ ಹೋಗಿದ್ದಾಗ ಅಲ್ಲಿಂದ ಇವರನ್ನು ಕಳುಹಿಸಿದ ಹೈದರಾಬಾದ್‌ನ ಏಜೆಂಟ್‌ನ್ನು ಸಂಪರ್ಕಿಸಲಾಗಿತ್ತು. ಸಂತಯ್ಯನನ್ನು ಫ್ರೀ ವೀಸಾದಲ್ಲಿ ಕಳುಹಿಸಲಾಗಿದೆ ಎಂದು ಏಜೆಂಟ್ ತಿಳಿಸಿದ್ದ. ಸಂತಯ್ಯ ವಿರುದ್ಧ ನಾಪತ್ತೆ ಕೇಸು ದಾಖಲಾದ್ದರಿಂದ ಪ್ರಾಯೋಜಕರಿಗೆ ಐದು ಸಾವಿರ ರಿಯಾಲ್ ಕೊಡದೆ ಊರಿಗೆ ಬರುವಂತಿರಲಿಲ್ಲ. ಪ್ರಾಯೋಜಕರನ್ನು ಮಸೀದಿಯ ಇಮಾಮ್ ಮಾತಾಡಿ ಒಪ್ಪಿಸಿದ್ದು ಊರಿಗೆ ಕಳುಹಿಸುವ ಏರ್ಪಾಡು ಮಾಡಿಸಿದ್ದಾರೆ.