ಬಹ್ರೈನ್: ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯಿಂದ ಬೃಹತ್ ಇಫ್ತಾರ್ ಕೂಟ
Update: 2016-07-02 23:52 IST
ಮನಾಮ, ಜು.2: ದಾರುಲ್ ಮುಸ್ತಫಾ ಮೋರಲ್ ಅಕಾಡಮಿ, ಬಹ್ರೈನ್ ಘಟಕದ ವತಿಯಿಂದ ಇತ್ತೀಚೆಗೆ ಮನಾಮ ಕೆಸಿಎಫ್ ಕಚೇರಿಯಲ್ಲಿ ಬೃಹತ್ ಇಫ್ತಾರ್ ಕೂಟ ಮತ್ತು ಆಧ್ಯಾತ್ಮಿಕ ಸಂಗಮ ಜರಗಿತು.
ಕಾರ್ಯಕ್ರಮವನ್ನು ಕೆಸಿಎಫ್ ಬಹ್ರೈನ್ ರಾಷ್ಟ್ರೀಯ ಸಮಿತಿಯ ನಾಯಕ ಹನೀಫ್ ಖಾಸಿಮಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಎಸ್ವೈಎಸ್ನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನೀ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣಗೈದು ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಬಹ್ರೈನ್ ಕಮಿಟಿ ಅಧ್ಯಕ್ಷ ಎಸ್.ಎಂ.ಫಾರೂಕ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಂಪ್ಯ, ಕೋಶಾಧಿಕಾರಿ ಜಮಾಲುದ್ದೀನ್ ವಿಟ್ಲ ಹಾಗೂ ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಬಹ್ರೈನ್ ಕಮಿಟಿ ಅಧ್ಯಕ್ಷ ಸೈಯದ್ ಅಲಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ಖಲಂದರ್ ಶರೀಫ್ ಕಕ್ಕೆಪದವು, ಕೋಶಾಧಿಕಾರಿ ಅಶ್ರಫ್ ಕಿನ್ಯ, ಹನೀಫ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.