×
Ad

ಯುರೋಪ್ ನಲ್ಲಿ ಬುರ್ಖಾ ನಿಷೇಧ ಪಾಲಿಸಿ, ಅರಬ್ ಉಡುಗೆ ಬೇಡ !

Update: 2016-07-03 17:46 IST

ದುಬೈ, ಜು. 4: ಇತ್ತೀಚಿನ ಭಯೋತ್ಪಾದಕ ದಾಳಿಯ ಬಳಿಕ ಅಮೆರಿಕ, ಯುರೋಪ್ ಗಳಲ್ಲಿ ಮುಸ್ಲಿಮರ ಮೇಲಿನ  ದ್ವೇಷ ದಾಳಿಗಳು ಹೆಚ್ಚುತ್ತಿದೆ. ಈ  ಹಿನ್ನೆಲೆಯಲ್ಲಿ ಈ ದೇಶಗಳಿಗೆ ಪ್ರಯಾಣಿಸುವ ತನ್ನ ಪ್ರಜೆಗಳಿಗೆ ಬುರ್ಖಾ ನಿಷೇಧ ಇರುವ ದೇಶಗಳಲ್ಲಿ ಆ ನಿಯಮವನ್ನು ಪಾಲಿಸುವಂತೆ ಹಾಗೂ ಯುರೋಪ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಂಪ್ರಾದಾಯಿಕ ಅರಬ್ ಉಡುಗೆಯನ್ನು ಧರಿಸುದಿರುವಂತೆ  ಯುಎಇ ಸರಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ. 
ವಿದೇಶಾಂಗ ಹಾಗೂ ಆಂತರಿಕ ಸಹಕಾರ ಸಚಿವಾಲಯ ಈ ನಿರ್ದೇಶನ ನೀಡಿದ್ದು ದೊಡ್ಡ ಮೊತ್ತದ ನಗದನ್ನೂ ಕೈಯಲ್ಲಿಟ್ಟುಕೊಳ್ಳಬೇಡಿ ಎಂದು ಹೇಳಿದೆ. ಇತ್ತೀಚಿಗೆ ಅಮೆರಿಕದ ಓಹಿಯೋದಲ್ಲಿ ಅರಬಿ ಮಾತನಾಡುತ್ತಿದ್ದ ಉದ್ಯಮಿಯೊಬ್ಬನನ್ನು ಪೊಲೀಸರು ಸುತ್ತುವರಿದು ಆತ ಐಸಿಸ್ ಬೆಂಬಲಿಗ ಎಂದು ವಶಕ್ಕೆ ಪಡೆದ ಘಟನೆ ನಡೆದಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News