×
Ad

ದುಬೈ: ದಾರುನ್ನೂರ್ ವತಿಯಿಂದ ಬೃಹತ್ ಇಫ್ತಾರ್ ಕೂಟ

Update: 2016-07-03 17:51 IST

ದುಬೈ, ಜು.3: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ಯುಎಇ ರಾಷ್ಟ್ರೀಯ ವತಿಯಿಂದ ದೇರಾ ರಾಫಿ ಹೋಟೆಲ್ ಸಭಾಂಗಣದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಯುಎಇ ಸಮಿತಿಯ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ದುಬೈ ಸುನ್ನಿ ಸೆಂಟರ್ ಅಧ್ಯಕ್ಷ ಅಸೈಯದ್ ಹಾಮಿದ್ ಕೋಯಮ್ಮ ತಂಙಳ್ ದುಆಶೀರ್ವಚನ ನೀಡಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಉಸ್ತಾದ್ ಸಲ್ಮಾನ್ ಅಝ್ಹರಿ, ದಾರುನ್ನೂರು ವಿದ್ಯಾಕೇಂದ್ರವು ಪದವಿ ಶಿಕ್ಷಣದ ಗುರಿಯನ್ನಿಟ್ಟುಕೊಂಡು ಕರ್ನಾಟಕದಲ್ಲಿ ದೊಡ್ಡ ಅಡಿಗಲ್ಲನ್ನಿಟ್ಟಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆ ವಿದ್ಯಾ ಸಂಸ್ಥೆಯ ಬೆಳವಣಿಗೆಗೆ ನಿಮ್ಮೆಲ್ಲರ ಪೂರ್ಣ ಬೆಂಬಲಬೇಕಾಗಿದೆ.ಅಲ್ಲದೆ ಈ ಸಂಸ್ಥೆ ಮುಂದೆ ಕರ್ನಾಟಕದಲ್ಲಿ ಸಮನ್ವಯ ಶಿಕ್ಷಣದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದರು. ಉಸ್ತಾದ್ ಅಬ್ದುಲ್ ಖಾದರ್ರ ನೇತೃತ್ವದಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮವು ಜರಗಿತು.

ಹೋಲಿ ಕುರಾನ್ ಅವಾರ್ಡ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರ ವ್ಯಕ್ತಿ ಪರಿಚಯವನ್ನು ದುಬೈ ಸರಕಾರಕ್ಕೆ ಸಲ್ಲಿಸಿ ಶಿಫಾರಸು ಮಾಡಿದ್ದಕ್ಕಾಗಿ ಅಸೈಯದ್ ಹಾಮಿದ್ ಕೋಯಮ್ಮ ತಂಙಳ್ರಿಗೆ ಸಲೀಂ ಅಲ್ತಾಫ್ ಕಾಣಿಕೆ ಮತ್ತು ಕೃತಜ್ಞತಾ ಪತ್ರವನ್ನು ನೀಡಿ ಗೌರವಿಸಿದರು.

ಸಮಸ್ತ ಮುಶಾವರ ಹಾಗೂ ಹಿರಿಯ ವಿದ್ವಾಂಸ ಶೈಖುನಾ ಎಂ.ಎಂ. ಉಸ್ತಾದ್ರಿಗೆ, ಉಸ್ತಾದ್ ಶೌಕತ್ ಅಲಿ ಹುದವಿ ಅವರಿಗೆ, ದುಬೈ ಸುನ್ನೀ ಸೆಂಟರ್ ಕಾರ್ಯದರ್ಶಿ ಉಸ್ತಾದ್ ಇಬ್ರಾಹಿಂ ಫೈಝಿ, ಕೆ. ಶಂಶುದ್ದೀನ್, ಉಸ್ತಾದ್ ಸಲ್ಮಾನ್ ಅಝ್ಹರಿ ಅವರಿಗೆ ಈ ವೇಳೆ ದಾರುನ್ನೂರಿನ ಪ್ರಮುಖರು ಶಾಲು ಹೊದಿಸಿ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಪ್ರಾಯೋಜಕರಾಗಿ ಬಶೀರ್ ಬಂಟ್ವಾಳ್, ಸಿಟಿ ವ್ಯೆ ರೆಸ್ಟೋರೆಂಟ್ನ ಎಂ.ಡಿ. ಮನ್ಸೂರ್ ಇಸ್ಮಾಯೀಲ್, ಸೇಫ್ ಟೆಲ್ ಮಲ್ಟಿ ಮೀಡಿಯಾ ಎಂ.ಡಿ. ಸೈಫು ಹಾಗೂ ಮತ್ತಿತರರು ಸಹಕರಿಸಿದ್ದರು.

ಕಾರ್ಯಕ್ರಮದಲ್ಲಿ ರಾಫಿ ಹೋಟೆಲ್ನ ಎಂ.ಡಿ. ಯೂಸುಫ್ ಸುಬ್ಬಯ್ಯ ಕಟ್ಟೆ, ದಾರುನ್ನೂರು ಪೋಷಕರಾದ ಬಶೀರ್ ಬಂಟ್ವಾಳ್, ಅಬ್ದುಲ್ಲಾ ಮದುಮೂಲೆ, ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಅಲ್ ಹತ್ಬೂರ್ ಗ್ರೂಪ್ ಎಂ.ಡಿ. ಇಕ್ಬಾಲ್ ಅಬ್ದುಲ್ ಹಮೀದ್, ಲಾರಾ ಆಟೋ ಪಾರ್ಟ್ಸ್‌ನ ಎಂ.ಡಿ. ಶಂಶುದ್ದೀನ್ ಕೆ., ದಾರುನ್ನೂರ್ ಯುಎಇ ಉಪದೇಶಕ ಅಸ್ಕರ್ ಅಲಿ ತಂಙಳ್, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ ಅಧ್ಯಕ್ಷ ಮುಹಿಯುದ್ದೀನ್ ಕುಟ್ಟಿ ಕಕ್ಕಿಂಜೆ, ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು, ಬೇರಿಲ್ ಇಂಟರ್ ನ್ಯಾಷನಲ್ ಎಂ.ಡಿ. ಮುಹಮ್ಮದ್ ಇಕ್ಬಾಲ್ ಬಾವ, ಕಲ್ಕಾರ್ ರಿಯಲ್ ಎಸ್ಟೇಟ್ನ ಎಂ.ಡಿ. ಶಂಶುದ್ದೀನ್ ಕಲ್ಕಾರ್, ನಕೀಲ್ ಪ್ರಾಪರ್ಟೀಸ್‌ನ ಇಂಜಿನಿಯರ್ ಮುಹಮ್ಮದ್ ಅಶ್ರಫ್, ಅಲ್ ಬಹರ್ ಡೀಸೆಲ್ನ ಎಂ.ಡಿ. ಖಾಲಿದ್ ಮುಹಮ್ಮದ್, ರಿಯತ್ ಅಲ್ ಶಮ್ಸ್ ಕಾಂಟ್ರಾಕ್ಟಿಂಗ್ ಮ್ಯಾನೇಜರ್ ಅಶ್ರಫ್ ಖಾನ್ ಮಾಂತೂರ್, ವಾಲ್ಸ್ಟ್ರೀಟ್ ಎಕ್ಸ್‌ಚೇಂಜ್ನ ಜುನೈದ್ ಷರೀಫ್, ಝಿಯೋ ಲೂಬ್ರಿಕೆಂಟ್ಸ್ನ ಎಂ.ಡಿ. ನಝೀರ್ ಮೂಡುಬಿದಿರೆ ಮೊದಲಾದವರು ಹಾಜರಿದ್ದರು.

ಇಫ್ತಾರ್ ಕೂಟದ ಯಶಸ್ಸಿಗೆ ಅಬ್ದುಸ್ಸಲಾಂ ಬಪ್ಪಳಿಗೆ, ಮುಹಮ್ಮದ್ ರಫೀಕ್ ಸುರತ್ಕಲ್, ಹಮೀದ್ ಮನಿಲ, ಸಮೀರ್ ಇಬ್ರಾಹಿಂ ಕಲ್ಲಾರೆ, ಉಸ್ಮಾನ್ ಕೆಮ್ಮಿಂಜೆ, ಸಂಶುದ್ದೀನ್ ಸೂರಲ್ಪಾಡಿ, ಅನ್ಸಾಫ್ ಪಾತೂರ್, ನವಾಝ್ ಬಿ.ಸಿ.ರೋಡ್, ಇಲ್ಯಾಸ್ ಕಡಬ, ಉಸ್ತಾದ್ ಷರೀಫ್ ಅಶ್ರಫಿ, ಶಾಜೀದ್ ಬಜ್ಪೆ, ಮುಸ್ತಾಕ್ ತೋಡಾರ್, ಹನೀಫ್ ಕೆ.ಮೂಡುಬಿದಿರೆ, ಅಬ್ದುಲ್ ರಹ್ಮಾನ್ ಬಾಳಿಯೂರ್, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಸುಹೈಲ್ ಚೊಕ್ಕಬೆಟ್ಟು, ಮುಹಮ್ಮದ್ ಮಾಡಾವು, ಸಫಾ ಇಸ್ಮಾಯೀಲ್ ಬಜ್ಪೆ, ಸಂಶೀರ್ ಬಾಂಬಿಲ, ಶಾಕಿರ್ ಕುಪ್ಪೆಪದವು, ಸುಲೈಮಾನ್ ಗಡಿಯಾರ್, ರಿಝ್ವೆನ್ ಬಜ್ಪೆ, ಸಫ್ವಾನ್ ಕುಪ್ಪೆಪದವು, ಹನಿಫ್ ಎಡಪದವು, ಇಮ್ರಾನ್ ಮಜಿಲೋಡಿ, ಅಬ್ದುಲ್ ಜಬ್ಬಾರ್ ಕಲ್ಲಡ್ಕ, ಅಬ್ದುರ್ರಝಾಕ್ ಸಾಲೆತ್ತೂರು, ಅರಿಫ್ ಗಡಿಯಾರ್, ದಾರುನ್ನೂರ್ ಯೂತ್ ಟೀಮ್, ದಾರುನ್ನೂರ್ ಇಫ್ತಾರ್ ಕಮಿಟಿ ಸದಸ್ಯರು, ದಾರುನ್ನೂರ್ ವಿವಿಧ ಘಟಕಗಳ ಪ್ರಮುಖರು ಸಹಕರಿಸಿದರು.

ಸಮಸ್ತ ಮುಶಾವರ ಹಾಗೂ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಪ್ರಧಾನ ಕಾರ್ಯದರ್ಶಿ ಶೈಖುನಾ ಉಮ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದುಬೈ ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಹುದವಿ ಉದ್ಘಾಟಿಸಿದರು. ದಾರುನ್ನೂರು ಇಫ್ತಾರ್ ಸಮಿತಿಯ ಅಧ್ಯಕ್ಷ ಅನ್ಸಾಫ್ ಪಾತೂರು ಸ್ವಾಗತಿಸಿ, ದಾರುನ್ನೂರು ಯೂತ್ ಟೀಮ್ ಅಧ್ಯಕ್ಷ ಶಂಶೀರ್ ಬಾಂಬಿಲ ವಂದಿಸಿದರು. ದಾರುನ್ನೂರ್ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News