ದುಬೈನ ಉಮ್ಮ್ ಅಲ್ ರಮೂಲ್‌ನಲ್ಲಿ ಅಗ್ನಿ ಆಕಸ್ಮಿಕ
Update: 2016-07-05 13:25 IST
ದುಬೈ, ಜು.5: ದುಬೈ ಫೆಸ್ಟಿವಲ್ ಸಿಟಿ ಎದುರುಗಡೆಯ ಉಮ್ಮ್ ಅಲ್ ರಮೂಲ್ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಘಟನೆ ನಡೆದಿದೆ. ಘಟನೆಯಿಂದ 15 ಅಂಗಡಿ-ಮುಗ್ಗಟ್ಟುಗಳು, ಎರಡು ಕಾರುಗಳು ಹಾಗೂ ಕಾರ್ಮಿಕರು ವಾಸಿಸುತ್ತಿದ್ದ ನಾಲ್ಕು ಕೊಠಡಿಗಳಿಗೆ ಹಾನಿಯಾಗಿವೆ.
ಬೆಳಗ್ಗೆ 5.58ಕ್ಕೆ ತಮಗೆ ಅಗ್ನಿ ಆಕಸ್ಮಿಕವಾಗಿರುವ ಬಗ್ಗೆ ಕರೆ ಬಂದಿತ್ತು ಘಟನೆಯಿಂದ ಯಾರಿಗೂ ಗಾಯವಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗುತ್ತಿದೆ. 8.44ರ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ನಾಗರಿಕ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಅಲ್ ರಶಿದಿಯಾ, ಅಲ್ ಘೂಸೈಸ್, ಅಲ್ ಖೌಸ್, ಪೋರ್ಟ್ ಸಯೀದ್ ಹಾಗೂ ಅಲ್ ಕರಮ ತಂಡಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನೆರವಾದವು.