ಬಹರೈನ್: ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಈದ್ ಸ್ನೇಹ ಸಮ್ಮಿಲನ
ಬಹ್ರೈನ್, ಜು.10: ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್ ಕರ್ನಾಟಕ ಘಟಕ ವತಿಯಿಂದ ಈದ್ ಸ್ನೇಹ ಸಮ್ಮಿಲನ - 2016 ಉಮ್ಮುಲ್ ಹಸಮ್ ನ ಬ್ಯಾಂಕಾಕ್ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮೊಹಮ್ಮದ್ ಹಫೀಝ್ ಉಳ್ಳಾಲ, ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ಇದರ ಅಧ್ಯಕ್ಷ ಹಂಝ ಪಟ್ಟಾಂಬಿ ಸಂಘಟನೆಯ ಕಾರ್ಯಚಟುವಟಿಕೆಯ ಬಗ್ಗೆ ಹಾಗೂ ಅದರ ಅವಶ್ಯಕತೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಮ್ಮದ್ ಫರಾಝ್ ಕಾವಲ್ ಕಟ್ಟೆ ವಹಿಸಿದ್ದರು.
ವೇದಿಕೆಯಲ್ಲಿ ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಬಹರೈನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯಹ್ಯಾ, ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕಾಧ್ಯಕ್ಷ ಮುಹಮ್ಮೆದ್ ಇರ್ಶಾದ್ ತುಂಬೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಕ್ವಿಝ್ ಹಾಗೂ ಇನ್ನಿತರ ಮನೋರಂಜನೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಂಝ ಪಟ್ಟಾಂಬಿ ಹಾಗೂ ಮೊಹಮ್ಮದ್ ಯಹ್ಯಾ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಎಲ್ಲಾ ರೀತಿಯ ಮನೋರಂಜನಾ ಅಟೋಟ ಕಾರ್ಯಕ್ರಮವನ್ನು ಸಫ್ವಾನ್ ವಿಟ್ಲ, ಮೊಇದೀನ್ ಇಶಾಕ್ ಉಚ್ಚಿಲ, ಸಿದ್ದೀಕ್ ಮಂಜೇಶ್ವರ ನಡೆಸಿಕೊಟ್ಟರು. ಅತಾವುಲ್ಲಾ ಸುಳ್ಯ ಸ್ವಾಗತಿಸಿ ನಿಝಾಮ್ ಮಂಗಳೂರು ವಂದಿಸಿದರು. ಇರ್ಫಾನ್ ಅಹ್ಮದ್ ಗುಲ್ಬರ್ಗ ಕಾರ್ಯಕ್ರಮವನ್ನು ನಿರೂಪಿಸಿದರು.