ಅಂತ್ಯ ಸಂಸ್ಕಾರಕ್ಕೆ ನೆರವಾದ ಇಂಡಿಯನ್ ಸೋಶಿಯಲ್ ಫಾರಮ್ ರಿಯಾದ್
ರಿಯಾದ್,ಜು12: ಎರಡು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾದ ಅಲ್ ಖರ್ಜ್ ಅಲ್ ಶಾಫಿ ಕಂಪೆನಿಗೆ ಕೆಲಸಕ್ಕೆ ಬಂದ ಶಿವಮೊಗ್ಗ ಜಿಲ್ಲೆಯ ಅಮ್ಜದ್ ಪಾಷರವರು ಶುಕ್ರವಾರದಂದು ಹೃದಯಾಘಾತದಿಂದ ಮರಣಹೊಂದಿದ್ದರು.
ತಕ್ಷಣ ಕಾರ್ಯಪ್ರವತ್ರರಾದ ಇಂಡಿಯಲ್ ಸೋಶಿಯಲ್ ಫಾರಮ್ ರಿಯಾದ್ ನ ಕಾರ್ಯಕರ್ತರಾದ ಇಸ್ಮಾಯಿಲ್ ಮಂಗಳಪೇಟೆಯರವರ ನೇತ್ವದಲ್ಲಿ ಇಬ್ರಾಹಿಂ ಆನಾಜೆ, ಅಮ್ಜದ್ ಶಿವಮೊಗ್ಗ , ಸೈಯ್ಯದ್ ಸಮೀರ್ ಶಿವಮೋಗ್ಗರವರ ತಂಡ ರಚಿಸಿ ಆಸ್ಪತ್ರೆ ಭೇಟಿ ನೀಡಿ ಮಯ್ಯತ್ ನ ಬಗ್ಗೆ ಮಾಹಿತಿ ಸಂಗ್ರಹಿಸಿ ಹಾಗೂ ಕುಟಂಬದ ಸದಸ್ಯರ ಜೊತೆ ಮಾತುಕತೆ ನಡೆಸಿ ಸೌದಿ ಅರೇಬಿಯಾದಲ್ಲಿಯೇ ಧಪನ್ ಕಾರ್ಯನಡೆಸುವ ಬಗ್ಗೆ ಕುಟಂಬಸ್ಥರ ಒಪ್ಪಿಗೆ ಪಡೆದು ರಿಯಾದ್ ರಾಯಭಾರಿ ಕಚೇರಿಗೂ ಹಾಗೂ ಪೊಲೀಸ್ ಠಾಣೆಗೆ ಭೇಟಿಕೊಟ್ಟು ಅಲ್ಲಿಂದ ದಾಖಲೆ ಪತ್ರಗಳನ್ನು ಪಡೆದು ಅಸ್ಪತ್ರೆಗೆ ನೀಡಿದರು.
ದಿನಾಂಕ 29/06/2016 ರ ಅಸರ್ ನಮಾಝ್ ನ ನಂತರ್ ಅಲ್ ಖರ್ಜ್ ನ ಮಲೀಕ್ ಅಬ್ದುಲ್ ಅಝೀಝ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಧಫನ್ ಕಾರ್ಯನಡೆಸಲಾಯಿತು.