×
Ad

ದುಬೈ : ಭಾರತೀಯ ಗೃಹಿಣಿಯಿಂದ ಆತ್ಮಹತ್ಯೆ

Update: 2016-07-18 11:43 IST

ದುಬೈ, ಜು.18: ದುಬೈ ನಗರದ ಅಲ್ ಖುಸೈಸ್ ಪ್ರದೇಶದ ತನ್ನ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾರತೀಯ ಗೃಹಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೃಹಿಣಿ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಕಳೆದ ಮೂರು ವರ್ಷಗಳಿಂದ ಆ ಮನೆಯಲ್ಲಿ ವಾಸವಾಗಿದ್ದು, ಕುಟುಂಬದಲ್ಲಿ ಯಾವುದೇ ಸಮಸ್ಯೆಯಿದ್ದಂತೆ ತೋರಿಲ್ಲವೆಂದು ನೆರೆಮನೆಯ ಕೆಲ ಮಂದಿ ಹೇಳಿದ್ದಾರೆ. ಆದರೆ ಆಕೆಯ ಸಾವಿನ ನಿಖರ ಕಾರಣ ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದು ಅದರ ಹಿಂದೆ ಕ್ರಿಮಿನಲ್ ಸಂಚು ಇರಬಹುದೆಂದು ಶಂಕಿಸಿದ್ದಾರೆ.

ಗೃಹಿಣಿ ಆತ್ಮಹತ್ಯೆಗೈದಿರುವ ಸುದ್ದಿಯನ್ನು ಆಕೆಯ ಪತಿಯೇ ಪೊಲೀಸರಿಗೆ ತಿಳಿಸಿದ್ದು ಆತನ ಪ್ರಕಾರ ಅವರು ಬೇಸಿಗೆ ಸಮಯದಲ್ಲಿ ಪ್ರವಾಸ ಹೋಗಲು ನಿರ್ಧರಿಸಿದ್ದರು. ತಾನು ಕೆಲಸದ ಮೇಲೆ ಹೊರ ಹೋಗಿ ಹಿಂದಿರುಗಿದಾಗ ಮಕ್ಕಳು ಟಿವಿ ನೋಡುತ್ತಿದ್ದರೆ ಪತ್ನಿ ಶೌಚಾಲಯದಲ್ಲಿದ್ದಳು. ಹಲವಾರು ಬಾರಿ ಬಾಗಿಲು ತಟ್ಟಿದರೂ ಪ್ರಯೋಜನವಾಗದಿದ್ದ ಹಿನ್ನೆಲೆಯಲ್ಲಿ ಬಾಗಿಲು ಒಡೆದಾಗ ಆಕೆ ನೇಣು ಬಿಗಿದಿರುವುದು ಕಂಡು ಬಂದಿತ್ತೆಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತಮ್ಮ ನಡುವೆ ಯಾವುದೇ ಕಲಹವಿರಲಿಲ್ಲ. ಆದರೆ ಪತ್ನಿಗೆ ಪ್ರವಾಸ ಹೋಗುವುದು ಇಷ್ಟವಿರಲಿಲ್ಲದಿದ್ದರೂ ಆಕೆಯ ವರ್ತನೆಯಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ ಎಂದು ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News