ಕುವೈಟ್: ರಕ್ತದೊತ್ತಡದಿಂದ ಶೇ 1ರಷ್ಟು ಸಾವು

Update: 2016-07-22 06:22 GMT

ಕುವೈಟ್ ಸಿಟಿ, ಜುಲೈ 22: ಸ್ವದೇಶಿಗಳು ಹಾಗೂ ವಿದೇಶಿಗಳು ಸಹಿತ ದೇಶದಲ್ಲಿ ರಕ್ತದೊತ್ತಡದಿಂದಾಗಿ ಮೆದುಳಿಗೆ ಆಘಾತ ಸಂಭವಿಸಿ ಶೇ.1ರಷ್ಟು ಮಂದಿ ಮೃತರಾಗುತ್ತಿದ್ದಾರೆ. ಮುಂದೆ ಇಂತಹ ಸಾವುಗಳ ಸಂಖ್ಯೆ ಅಧಿಕಗೊಳ್ಳಬಹುದು ಎಂದು ಆರೋಗ್ಯ ಸಚಿವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಡಾ. ಖಾಲಿದ್ ಅಲ್ ಸಹ್ಯಾವಿ ತಿಳಿಸಿದ್ದಾರೆಂದು ವರದಿಯಾಗಿದೆ. ಪ್ರಸ್ತುತ ದೇಶವಾಸಿಗಳಲ್ಲಿ ಪ್ರತಿವರ್ಷ ಶೇ.1ರಷ್ಟು ಜನರು ರಕ್ತದೊತ್ತಡ ಹಾಗೂ ಪಕ್ಷಾಘಾತದಿಂದ ಮೃತರಾಗುತ್ತಿದ್ದಾರೆಂದು ಹೇಳಿದ್ದಾರೆ. ತಪ್ಪಾದ ಆಹಾರರೀತಿ, ವ್ಯಾಯಾಮ ಮಾಡದಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿರಬಹುದು. ಹದಿನೆಂಟು ವರ್ಷ ವಯಸ್ಸಿನ ಅಧಿಕ ಮಂದಿಯಲ್ಲಿ ರಕ್ತದೊತ್ತಡ ಕಂಡು ಬರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.

 ವಿಶ್ವ ಆರೋಗ್ಯ ಸಂಘಟನೆಯ ವರದಿಯ ಪ್ರಕಾರ ಕುವೈಟ್‌ನಲ್ಲಿ ಶೇ.20ರಷ್ಟು ಸಿಹಿಮೂತ್ರ ರೋಗಿಗಳು ಹಾಗೂ ಶೇ.20ರಷ್ಟು ಮಂದಿ ರಕ್ತದೊತ್ತಡ ರೋಗಿಗಳು , ಶೇ.40ರಷ್ಟುಮಂದಿ ಹೆಚ್ಚು ದಪ್ಪ ಶರೀರದಿಂದಾಗಿ ಕಷ್ಟ ಎದುರಿಸುವವರಿದ್ದಾರೆ. ಶೇ.62.5 ಮಂದಿ ಧೂಮಪಾನ ಮಾಡುವವರು ಉದಾಸೀನದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶೇ.55.9 ಮಂದಿ ಹೃದಯಾಘಾತಕ್ಕೆ ಕಾರಣವಾಗುವ ಕೊಲೊಸ್ಟ್ರೋಲ್ ಬಾಧಿತರು ಇದ್ದಾರೆ ಎಂದು ಡಾ.ಖಾಲಿದ್ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News