ರಿಯಾದ್: ಭಾರತೀಯ ಯುವತಿ ಆತ್ಮಹತ್ಯೆ

Update: 2016-07-25 11:50 GMT

  ರಿಯಾದ್,ಜುಲೈ 25: ಕೇರಳದ ಕುಟುಂಬವೊಂದರ ಬಳಿ ಕೆಲಸಗಿತ್ತಿ ಆಗಿ ಕೆಲಸಮಾಡುತ್ತಿದ್ದ ಕೇರಳದವರೇ ಆದ ಮಹಿಳೆಯೊಬ್ಬರು ಕೆಲಸದ ಸ್ಥಳದಲ್ಲಿ ನೇಣುಹಾಕಿಕೊಂಡು ಮೃತರಾದ ಘಟನೆ ನಿನ್ನೆ ಸಂಭವಿಸಿದೆ ಎಂದು ವರದಿಯಾಗಿದೆ. ಆಲಪ್ಪುಝ ಮನ್ನಾರ್ ಪಾವೂರ್‌ಕರ ಸ್ವದೇಶಿ ಮೂರ್ತಿಟ್ಟ ಕಣ್ಣನ್ ಪಡವಿಲ್ ಅಂಬುಜಾಕ್ಷ ಎಂಬವರ ಪತ್ನಿ ಸ್ಮಿತಾ(34) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ರಿಯಾದ್‌ನ ಮಅ್ದರ್ ಡಿಸ್ಟ್ರಿಕ್ಟ್‌ನ ಪ್ಲಾಟ್‌ ಒಂದರಲ್ಲಿ ಫ್ಯಾನ್‌ಗೆ ನೇಣುಹಾಕಿಕೊಂಡು ಮಹಿಳೆ ಸಾವನ್ನಪ್ಪಿದ್ದು ಆಲಪ್ಪುಝ ಚೆಪ್ಪಾಡ್‌ನ ಮೋನಿಯವರ ಕುಟುಂಬವಾಸ ವಿದ್ದ ಪ್ಲಾಟ್‌ನಲ್ಲಿ ಕೆಲಸಗಿತ್ತಿ ಆಗಿ ಇವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೋನಿ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದರೆ ಅವರ ಪತ್ನಿ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದಾರೆ. ಈ ದಂಪತಿಗಳ ನಾಲ್ಕೂವರೆ ವರ್ಷದ ವಯಸ್ಸಿನ ಗಂಡು ಮಗುವನ್ನು ನೋಡಿಕೊಳ್ಳಲು ಸ್ಮಿತಾರನ್ನು ಕರೆತರಲಾಗಿತ್ತು ಎನ್ನಲಾಗಿದೆ.

ಅಸಹಜ ಮರಣ ಎಂದುಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಮನೆಯೊಡೆಯ ಮೋನಿಯನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದು ನಂತರ ಬಿಟ್ಟುಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಹೊಸ ಮನೆ ಕಟ್ಟಿಸಿದ  ಸಾಲವನ್ನು ತೀರಿಸಲಿಕ್ಕಾಗಿ ಸ್ಮಿತಾ ವಿದೇಶದಲ್ಲಿ ದುಡಿಯಲು ಬಂದಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News