×
Ad

ಕುವೈಟ್: ಗಡಿಪಾರು ಶಿಕ್ಷೆಗೊಳಗಾದ ಕೋತಿ!

Update: 2016-07-26 10:44 IST

ಕುವೈಟ್ ಸಿಟಿ, ಜುಲೈ 26: ಕೋತಿಯೊಂದು ಮಾದಕವಸ್ತು ಸೇವನೆ ಆರೋಪದಲ್ಲಿ ಇಂಡೊನೇಶ್ಯಕ್ಕೆ ಗಡಿಪಾರು ಶಿಕ್ಷೆಗೊಳಗಾಗಿ ಸದ್ಯ ಇಲ್ಲಿನ ಮೃಗಾಲಯದಲ್ಲಿದೆ ಎಂದು ವರದಿಯಗಿದೆ. ಎರಡು ತಿಂಗಳ ಹಿಂದೆ ಇದು ಪೊಲೀಸರ ಬಲೆಗೆ ಬಿದ್ದಿತ್ತು. ಇದರ ಮಾಲಕನಾದ ಕುವೈಟ್ ಪ್ರಜೆ ಕಾರಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದರಿಂದ ಇದು ಮತ್ತುಇದರ ಮಾಲಕ ಇಬ್ಬರೂ ಮಾದಕ ವ್ಯಸನಿಗಳೆಂಬ ಕತೆ ಪೊಲೀಸರ ಮುಂದೆ ಬಹಿರಂಗಗೊಂಡಿತ್ತು ಎಂದು ವರದಿ ತಿಳಿಸಿದೆ.

ಕೋತಿಯ ಮಾಲಕ ಮಾದಕ ವಸ್ತು ಸೇವಿಸಿದ್ದರಿಂದ ಆತ ಚಲಾಯಿಸುತ್ತಿದ್ದ ಕಾರು ಎಲ್ಲಿಗೋ ಡಿಕ್ಕಿ ಹೊಡೆಯಿತು. ಪೊಲೀಸರು ಅಪಘಾತ ಸ್ಥಳದಿಂದ ಕಾರಿನ ಚಾಲಕ ಹಾಗೂ ಕೋತಿಯನ್ನು ಠಾಣೆಗೆ ಕರೆದೊಯ್ದಿದ್ದರು. ನಂತರ ಕೋತಿಯನ್ನು ಮೃಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಮೃಗಾಲಯದಲ್ಲಿ ಕೋತಿಗೆ ಹಾಲು, ಹಣ್ಣು, ಐಸ್ ಕ್ರೀಮ್ ನೀಡಿದರೆ ಸಾಲದು. ಅದು ಆವರಗೆ ಸೇವಿಸುತ್ತಿದ್ದ ಮಾದಕವಸ್ತುವನ್ನೂ ನೀಡಬೇಕಿತ್ತು. ಈ ಸಮಸ್ಯೆಯನ್ನು ಮೃಗಾಲಯದ ಅಧಿಕಾರಿಗಳು ಗ್ರಹಸಚಿವಾಲಯಕ್ಕೆ ತಿಳಿಸಿದ್ದರಿಂದ ಕೋತಿಯನ್ನು ಗಡಿಪಾರು ಮಾಡುವ ನಿರ್ಧಾರ ತಳೆಯಲಾಗಿದೆ ಎಂದು ವರದಿ ತಿಳಿಸಿದೆ.

 ಒರಂಗ್ಟಾನ್ ಜಾತಿಯ ಕೋತಿ ಇದಾಗಿದ್ದು ಇವುಗಳು ಹೆಚ್ಚಾಗಿ ಇಂಡೋನೇಶ್ಯದ ಕಾಡುಗಳಲ್ಲಿ ಕಂಡುಬರುತ್ತವೆ. ಆದ್ದರಿಂದ ಈಗ ಮೃಗಾಲಯದ ಅಧಿಕಾರಿಗಳು ಅಂತಾರಾಷ್ಟ್ರಿಯ ಕಾಡು ಪ್ರಾಣಿ ಸಂರಕ್ಷಣೆ ಒಪ್ಪಂದ ಪ್ರಕಾರ ಕೋತಿಯ ಗಡಿಪಾರಿಗಾಗಿ ಇಂಡೊನೇಶ್ಯನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿಸುತ್ತಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News