×
Ad

ಸೌದಿಯಲ್ಲಿ ವಲಸಿಗರು ಎಷ್ಟು ಸಂಪಾದಿಸುತ್ತಾರೆ ?

Update: 2016-07-29 14:07 IST

ರಿಯಾದ್, ಜು.29: ಸೌದಿಯಲ್ಲಿ ಸಾಕಷ್ಟು ಸಂಖ್ಯೆಯ ವಲಸಿಗರು ವಿವಿಧ ಉದ್ಯೋಗಗಳನ್ನು ಮಾಡುತ್ತಿದ್ದರೂ, ಅವರೆಲ್ಲಾ ಎಷ್ಟು ಸಂಪಾದಿಸುತ್ತಾರೆಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.

ಜನರಲ್ ಆರ್ಗನೈಝೇಶನ್ ಫಾರ್ ಸೋಶಿಯಲ್ ಇನ್ಶೂರೆನ್ಸ್ ತಯಾರಿಸಿರುವ ವರದಿಯೊಂದರಂತೆ 25 ಲಕ್ಷಕ್ಕೂ ಹೆಚ್ಚು ವಲಸಿಗರು ಮಾಸಿಕ 500 ಸೌದಿ ರಿಯಾಲ್‌ಗಿಂತಲೂ ಕಡಿಮೆ ವೇತನ ಪಡೆಯುತ್ತಿದ್ದರೆ, ಸುಮಾರು3 ಲಕ್ಷ ವಲಸಿಗರು 500 ರಿಂದ1000 ಸೌದಿ ರಿಯಾಲ್ ತನಕ ವೇತನ ಪಡೆಯುತ್ತಾರೆ. ಮಾಸಿಕ 1000 ರಿಯಾಲ್ ಗಿಂತಲೂ ಕಡಿಮೆ ವೇತನ ಪಡೆಯುತ್ತಿರುವ ವಲಸಿಗರ ಸಂಖ್ಯೆ ಸುಮಾರು 50 ಲಕ್ಷ ಎಂದು ವರದಿ ತಿಳಿಸಿದೆ.

ಸಾಮಾಜಿಕ ಸುರಕ್ಷಾ ಯೋಜನೆಯನ್ವಯ ನೋಂದಾವಣೆ ಮಾಡಿರುವ 34,351 ಸೌದಿ ಉದ್ಯೋಗಿಗಳು ತಿಂಗಳಿಗೆ 2000 ಸೌದಿ ರಿಯಾಲ್ ಗೂ ಕಡಿಮೆ ವೇತನ ಪಡೆಯುತ್ತಿದ್ದರೆ,111,694 ಉದ್ಯೋಗಿಗಳು 2,500 ರಿಯಾಲ್‌ಗಿಂತ ಕಡಿಮೆ ವೇತನ ಹಾಗೂ 16,779 ಸೌದಿ ಉದ್ಯೋಗಿಗಳು 3,000 ಸೌದಿ ರಿಯಾಲ್‌ಗಳಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ.

2.5 ಲಕ್ಷಕ್ಕಿಂತಲೂ ಹೆಚ್ಚಿನ ಸೌದಿ ಉದ್ಯೋಗಿಗಳು ಮಾಸಿಕ 10,000 ರಿಯಾಲ್ ಗಿಂತ ಹೆಚ್ಚು ವೇತನ ಪಡೆಯುತ್ತಿದ್ದರೆ, ಇಷ್ಟೇ ವೇತನ ಪಡೆಯುವ ಸೌದಿಯೇತರರ ಸಂಖ್ಯೆ2.3 ಲಕ್ಷ ಆಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News