ದಮ್ಮಾಮ್: ವಾಹನ ಅಪಘಾತ, 15 ಮಂದಿಗೆ ಗಾಯ
Update: 2016-07-29 14:25 IST
ದಮ್ಮಾಮ್, ಜುಲೈ 29: ದಮ್ಮಾಮ್ ಸೆಕೆಂಡ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ವ್ಯಾನೊಂದು ಅಪಘಾತಕ್ಕೀಡಾಗಿ ಹದಿನೈದು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇವರಲ್ಲಿಒಬ್ಬಾತ ಗಂಭೀರವಾಗಿ ಗಾಯಗೊಂಡಿದ್ದು ಸೆಕೆಂಡ್ ಇಂಡಸ್ಟ್ರೀಯಲ್ ಏರಿಯಾದಲ್ಲಿ ಮುದುನ ಸಮೀಪ ಬೆಳಗ್ಗೆ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಚಲಿಸುವ ವೇಳೆ ವ್ಯಾನ್ ಮಗುಚಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಐದು ಆ್ಯಂಬುಲೆನ್ಸ್ ಯುನಿಟ್‌ಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಕ್ಕೆ ನೇತೃತ್ವ ನೀಡಿದೆ. ಗಾಯಾಳುಗಳನ್ನು ದಮ್ಮಾಮ್ ಸೆಂಟ್ರಲ್ ಆಸ್ಪತ್ರೆ, ಕಿಂಗ್ ಫಹದ್ ಆಸ್ಪತ್ರೆ, ಮುವಾಸತ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.