ಕತರ್: ಅಪರಾಧಿ ಕೃತ್ಯಗಳಲ್ಲಿ, ಅಪಘಾತ ಘಟನೆಗಳಲ್ಲಿ ಇಳಿಕೆ

Update: 2016-07-30 05:37 GMT

ದೋಹ,ಜುಲೈ 30: ಸುರಕ್ಷೆ ಹಾಗೂ ಭದ್ರತೆಯನ್ನು ಖಚಿತಪಡಿಸುವ ಗ್ರಹಸಚಿವಾಲಯದ ಕಾರ್ಯಕ್ರಮಕ್ಕೆ ಭಾರೀ ಯಶಸ್ಸು ಲಭಿಸಿದೆಯೆಂದು ವರದಿಯಾಗಿದೆ. ಕತರ್‌ನ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿ ಕಳೆದ ವರ್ಷ ಗಣನೀಯ ಇಳಿಕೆಯಾಗಿದೆ ಎಂದು ಸಚಿವಾಲಯದ ಲೆಕ್ಕಗಳು ವಿವರಿಸಿದೆ. ವಾಹನ ಕಳ್ಳತನದ ಪ್ರಕರಣಗಳ ಸಂಖ್ಯೆ ಶೇ.10.3, ನಕಲಿ ದಾಖಲೆಗಳನ್ನು ತಯಾರಿಸುವುದಕ್ಕೆ ಕುರಿತ ಪ್ರಕರಣಗಳಲ್ಲಿ ಶೇ.48.3, ಚೆಕ್‌ಬೌನ್ಸ್ ಪ್ರಕರಣಗಳಲ್ಲಿ ಶೇ.3.1 ರಷ್ಟು ಇಳಿಕೆ ದಾಖಲಾಗಿದೆಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ದೇಶದ ಸುರಕ್ಷೆಗೆ ಹಾನಿಕರವಾದ ಅಪರಾಧಕೃತ್ಯಗಳಲ್ಲಂತೂ ಭಾರೀ ಇಳಿಕೆಯಾಗಿದ್ದು ವಿಶ್ವಸಂಸ್ಥೆ ನಿಷ್ಕರ್ಶೆಯ(ಯುಎನ್‌ಒಡಿಸಿ) ಸರಾಸರಿ ದರಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ದೇಶದಲ್ಲಿ ಅಪರಾಧಕೃತ್ಯಗಳ ಪ್ರಮಾಣವಿದೆ ಎನ್ನಲಾಗಿದೆ.

  ಅಪಘಾತ ಸಮಯದಲ್ಲಿ ಪೊಲೀಸರು ಅತೀ ಶೀಘ್ರ ಸ್ಥಳಕ್ಕೆ ಅಂದರೆ ಏಳು ನಿಮಿಷದಲ್ಲಿ ತಲುಪುತ್ತಿದ್ದಾರೆ ಎನ್ನಲಾಗಿದೆ. ಕೊಲೆಕೃತ್ಯಗಳಲ್ಲಿ ಶೇ.45.5, ಬಲಪ್ರಯೋಗದ ದರೋಡೆ ಪ್ರಕರಣಗಳಲ್ಲಿ ಶೇ. 75, ಕಳ್ಳತನ ಪ್ರಕರಣದಲ್ಲಿ ಶೇ.20.4 ಆಗಿ ಇಳಿಕೆಯಾಗಿದೆ.ಅಪರಾಧಕೃತ್ಯಗಳನ್ನು ತಡೆಯುವ ಕುರಿತು ಅರಬ್ ರಾಷ್ಟ್ರಗಳ ಕ್ರಮಗಳನ್ನು ವಿಶ್ಲೇಷಿಸುವ ವರದಿಯಲ್ಲಿ ಕತರ್ ಅಪರಾಧಕೃತ್ಯಗಳನ್ನು ತಡೆಯುವುದರಲ್ಲಿ ಪ್ರಥಮಸ್ಥಾನದಲ್ಲಿದೆ ಎಂದು ಕತರ್ ಪೊಲೀಸ್ ಮ್ಯಾಗಝಿನ್ ಆಧಾರದಲ್ಲಿ ಪೆನಿನ್‌ಸುಲ ವರದಿಮಾಡಿದೆ. ಅಪಘಾತದ ಪ್ರಮಾಣದಲ್ಲಿ ಶೇ.5.5ರಷ್ಟು ಕಡಿಮೆಯಾಗಿದೆ.ಹತ್ತುವರ್ಷಗಳ ಲೆಕ್ಕವನ್ನು ನೋಡಿದರೆ ಶೇ.76.9ರಷ್ಟು ಅಪಘಾತಗಳು ಕಡಿಮೆಯಾಗಿವೆ. ಟ್ರಾಫಿಕ್ ಇಲಾಖೆಯ ಸಂಚಾರ ದಳ 2015ರಲ್ಲಿ ಒಟ್ಟು 2,207,720 ಗಂಟೆ ಸಂಚರಿಸಿದೆ. 2015ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಶೇ.97.9 ಸಣ್ಣಪುಟ್ಟಗಾಯಗಳಾದ ಘಟನೆಗಳಾಗಿವೆ. ಗಂಭೀರಗಾಯಗೊಂಡ ಅಪಘಾತಗಳ ಸಂಖ್ಯೆ ಶೇ.2.2ರಷ್ಟು ಮಾತ್ರ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News