ಮದೀನಾ ತಲುಪಿದ ಕರ್ನಾಟಕದ ಮೊದಲ ಹಜ್ ಯಾತ್ರಾರ್ಥಿಗಳ ತಂಡ

Update: 2016-08-05 03:53 GMT

ಸೌದಿ ಅರಬಿಯ, ಆ.5: ಪ್ರಸಕ್ತ ಸಾಲಿನ ಹಜ್ ಯಾತ್ರಾರ್ಥಿಗಳನ್ನೊಳಗೊಂಡ ರಾಜ್ಯದ ಮೊದಲ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಹೊರಟ ವಿಮಾನ ಗುರುವಾರ ರಾತ್ರಿ ಮದೀನಾದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣಕ್ಕೆ ತಲುಪಿದೆ.
 ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ 152 ಯಾತ್ರಾರ್ಥಿಗಳನ್ನು ಅಧಿಕಾರಿಗಳೊಂದಿಗೆ ಕೆ.ಸಿ.ಎಫ್. ಕಾರ್ಯಕರ್ತರು ಖರ್ಜೂರ, ಜಪಮಾಲೆ, ನೀರು, ನೀಡಿ ಬರಮಾಡಿಕೊಂಡರು. ಯಾತ್ರಾರ್ಥಿಗಳು ಉಳಿದುಕೊಳ್ಳಲು ಲಾಡ್ಜ್‌ಗಳ ಮಾಹಿತಿ ಸಂಗ್ರಹಿಸಿದ ಕಾರ್ಯಕರ್ತರು, ಅವರ ಲಗೇಜು, ಸಾಮಗ್ರಿಗಳನ್ನು ಅವರ ತಂಗುದಾಣಗಳಿಗೆ ತಲುಪಿಸವಲ್ಲಿ ಸಹಕರಿಸಿದರು.
ಗುರುವಾರ ಪೂರ್ವಾಹ್ನ 11:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಇಂಧನ ತುಂಬಿಸಲು ಶಾರ್ಜಾದಲ್ಲಿ ಅಪರಾಹ್ನ 3.05ಕ್ಕೆ ಇಳಿದಿತ್ತು. ಅಲ್ಲಿಂದ 3:30ಕ್ಕೆ ಮದೀನಾಕ್ಕೆ ಮರುಯಾನ ಆರಂಭಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಸುಮಾರು ಐದು ತಾಸುಗಳು ತಡವಾಗಿ ಅಂದರೆ ರಾತ್ರಿ 8:30ರ ಸುಮಾರಿಗೆ ಶಾರ್ಜಾದಿಂದ ಹೊರಟಿತ್ತು. ಇದರಿಂದಾಗಿ ವಿಮಾನವು ಮದೀನಾ ತಲುಪುವಲ್ಲಿ ನಿಗದಿತ ಅವಧಿಗಿಂತ ಬಹಳಷ್ಟು ವಿಳಂಬವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News