ಕಠಿಣ ಉಷ್ಣತೆ: ಕಾನೂನು ಉಲ್ಲಂಘಿಸಿದ 60 ಕಂಪೆನಿಗಳ ವಿರುದ್ಧ ಕ್ರಮ ಜರಗಿಸಿದ ಕತರ್

Update: 2016-08-06 09:35 GMT

ದೋಹ, ಆ.6: ಕಠಿಣ ಉಷ್ಣತೆಯನ್ನು ಪರಿಗಣಿಸಿ ಸರಕಾರ ಕಾರ್ಮಿಕರಿಗಾಗಿ ಘೋಷಿಸಿದ ಸೌಲಭ್ಯಗಳನ್ನು ನೀಡದೆ ಕೆಲಸ ಮಾಡಿಸಿದ 60 ಕಂಪೆನಿಗಳ ವಿರುದ್ಧ ಕತರ್ ಸರಕಾರ ಕಠಿಣ ಕ್ರಮಕೈಗೊಂಡಿದೆ. ತೀವ್ರ ಉಷ್ಣತೆಯಿರುವಾಗ ತನ್ನ ಕಾರ್ಮಿಕರಿಂದ ಹೊರಗಿನ ಕೆಲಸವನ್ನು ಮಾಡಿಸಿದ ಕಂಪೆನಿಗಳ ಚಟುವಟಿಕೆಗಳನ್ನೆ ಸರಕಾರ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

 ಆಡಳಿತ ಸುಧಾರಣೆ, ಕಾರ್ಮಿಕ ಅಭಿವೃದ್ಧಿ ಸಚಿವಾಲಯದ ಮುಖ್ಯಸ್ಥ ಮುಹಮ್ಮದ್ ಅಲ್‌ಮೀರ್ ಈ ಮಾಹಿತಿಯನ್ನು ತಿಳಿಸಿದ್ದುಸಚಿವಾಲಯ ಈ ಕಂಪೆನಿಗಳ ವಿರುದ್ಧ ಹೆಚ್ಚಿನ ತನಿಖೆೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಕಾನೂನು ಉಲ್ಲಂಘಿಸಿದ ಕಂಪೆನಿಗಳು ಸದ್ಯ ತಮ್ಮ ಇಡೀ ಚಟುವಟಿಕೆಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಬೇಕೆಂದು ಸಚಿವಾಲಯ ಆದೇಶಿಸಿದೆ. ತಪ್ಪಿತಸ್ಥ ಕಂಪೆನಿಗಳ ಲೈಸನ್ಸ್ ರದ್ದತಿ ಸಹಿತ ಕಾನೂನುಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ ನಿರಂತರ ಐದು ಗಂಟೆಗಿಂತ ಹೆಚ್ಚು ಸಮಯ ಕೆಲಸ ಮಾಡಿಸಬಾರದೆಂದು ಸರಕಾರದ ಕಾನೂನು ಇದೆ. ಕತರ್‌ನಲ್ಲಿ ಅತ್ಯಂತ ಉಷ್ಣತೆಯು ಜೂನ್‌ನಿಂದ ಆಗಸ್ಟ್ ತಿಂಗಳ ಕೊನೆಯವರೆ ಇರುತ್ತದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News