ದುಬೈ: ದಾರುನ್ನೂರ್‌ನ 23ನೆ ಶಾಖೆಗೆ ಚಾಲನೆ

Update: 2016-08-07 05:53 GMT

ದುಬೈ, ಆ.6: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಸತ್ವಾ ನೂತನ ಶಾಖೆಗೆ ಅಲ್ ಜಾಫಿಲಿಯಾದಲ್ಲಿರುವ ದಾರುನ್ನೂರ್‌ನ ಪೋಷಕ ಬಶೀರ್ ಬಂಟ್ವಾಳ್ ಅವರ ನಿವಾಸದಲ್ಲಿ ಚಾಲನೆ ನೀಡಲಾಯಿತು.

ದಾರುನ್ನೂರ್ ಯೂತ್ ಟೀಮ್ನ ಗೌರವಾಧ್ಯಕ್ಷ ಇಮ್ರಾನ್ ಮಜಿಲೋಡಿ ಉದ್ಘಾಟಿಸಿದರು.

ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ದಾರುನ್ನೂರಿನ ಸಮಗ್ರ ಪರಿಚಯವನ್ನು ನೀಡಿದರು. ಕಳೆದ ಎರಡು ವರ್ಷಗಳಿಂದ ದಾರುನ್ನೂರ್ ಕ್ಯಾಂಪಸ್ನಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಈ ವರ್ಷವೂ ಸುಮಾರು 200ರಷ್ಟು ಅರ್ಜಿಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಿದ ಬಳಿಕ ಪ್ರತಿಭಾನ್ವಿತ 45 ವಿದ್ಯಾರ್ಥಿಗಳು ಕಲಿಯಲು ಅರ್ಹರಾಗಿದ್ದಾರೆ ಎಂದರು.

ದಾರುನ್ನೂರ್ ಯುಎಇ ಕಾರ್ಯದರ್ಶಿ ಸಮೀರ್ ಇಬ್ರಾಹೀಂ ಕಲ್ಲರೆ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಶೀರ್ ಬಂಟ್ವಾಳ್, ಅಧ್ಯಕ್ಷರಾಗಿ ಅಶ್ರಫ್ ಬಾಂಬಿಲ, ಉಪಾಧ್ಯಕ್ಷರಾಗಿ ತಾಜುದ್ದೀನ್ ಬೈರಿಕಟ್ಟೆ, ರಶೀದ್ ಬಿಕರ್ನಕಟ್ಟೆ, ಶುಹೈಬ್ ಮಂಗಳೂರು ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ರಮೀಝ್ ಮುಹಮ್ಮದ್ ಉಳ್ಳಾಲ, ಕಾರ್ಯದರ್ಶಿಗಳಾಗಿ ಆರಿಫ್ ಮಂಗಳೂರು, ತಂಝೀಲ್ ಉಳ್ಳಾಲ, ಸಿದ್ದೀಕ್ ಸುಂಕದಕಟ್ಟೆ, ಕೋಶಾಧಿಕಾರಿಯಾಗಿ ಅಶ್ಪರ್ ಮಲಾರ್ ಆಯ್ಕೆಯಾದರು. ಕನ್ವೀನರ್‌ಗಳಾಗಿ ಇಮ್ತಿಯಾಝ್ ಪುತ್ತೂರು, ಯೂನುಸ್ ಭಟ್ಕಳ್, ಅಮೀರ್ ಭಟ್ಕಳ್, ಶಂಸೀರ್ ಕೆ.ಸಿ.ರೋಡ್, ಸಿದ್ದೀಕ್ ಆಲಡ್ಕ, ಇಫ್ತಿಕಾರ್ ಕಾಶಿಪಟ್ಣ ರನ್ನು ನೇಮಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾಸೀನ್ ಶಿರಾಳಿ, ಸುಲೈಮಾನ್ ಶಿರಾಳಿ, ಮುಸ್ತಫಾ ಬಿ.ಸಿ.ರೋಡ್, ನವಾಝ್ ಉಪ್ಪಿನಂಗಡಿ, ಅಮ್ಜದ್ ಮಂಗಳೂರು, ಮುಹಮ್ಮದ್ ಶಾಕಿರ್ ವೇಣೂರು, ಜಾವೆದ್ ಮಂಗಳೂರು , ಅಸ್ಕರ್ ಅಲಿ ಬಿ.ಸಿ.ರೋಡ್, ಅಫ್ತಾಬ್ ಕಿನ್ನಿಗೋಳಿ, ಮುಬೀನ್ ಕೆ.ಸಿ.ರೋಡ್, ಅಫ್ಲಾಲ್ ಬಜ್ಪೆ, ನಝೀರ್ ಅಹ್ಮದ್ ಕಾರಾಜೆ, ಹನೀಫ್ ಭಟ್ಕಳ್‌ರನ್ನು ಆರಿಸಲಾಯಿತು.

ನೂತನ ಸಮಿತಿಯ ಗೌರವಾಧ್ಯಕ್ಷ ಬಶೀರ್ ಬಂಟ್ವಾಳ್ ಮಾತನಾಡಿ, ಅಲ್ಪಾವಧಿಯಲ್ಲಿ ಹೆಚ್ಚು ಪ್ರಶಸ್ತಿ ಮತ್ತು ಗೌರವವನ್ನು ಪಡೆಯುವಲ್ಲಿ ದಾರುನ್ನೂರ್ ಸಫಲವಾಗಿದ್ದು ಅತ್ಯಂತ ಶಿಸ್ತು ಬದ್ಧ ಮತ್ತು ನೇರ ಹಾದಿಯಲ್ಲಿ ದಾರುನ್ನೂರ್ ಮುಂದುವರಿಯುತ್ತಿರುವುದು ತುಂಬಾ ಸಂತೋಷವನ್ನು ತಂದಿದೆ. ದಾರುನ್ನೂರಿಗೆ ನನ್ನ ಸಹಕಾರ ಇದೆ ಎಂದು ಶುಭಹಾರೈಸಿದರು.

ನೂತನ ಅಧ್ಯಕ್ಷ ಅಶ್ರಫ್ ಬಾಂಬಿಲ ಮಾತನಾಡಿ ಎಲ್ಲರ ಸಹಕಾರ ಕೋರಿದರು. ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಅಬ್ದುಸ್ಸಲಾಮ್ ಬಪ್ಪಳಿಗೆ, ಕಾರ್ಯದರ್ಶಿ ಮುಹಮ್ಮದ್ ರಫೀಕ್ ಸುರತ್ಕಲ್, ಸಂಚಾಲಕ ಆಸಿಫ್ ಬಿ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು.

ದಾರುನ್ನೂರ್ ಯುಎಇನ ಸಂಘಟನಾ ಕಾರ್ಯದರ್ಶಿ ಹಮೀದ್ ಮನಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಾರುನ್ನೂರ್ ಯುಎಇನ ಉಪಾಧ್ಯಕ್ಷ ನವಾಝ್ ಬಿ.ಸಿ.ರೋಡ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News