ಬಯ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ವಾಚ್‌ಮ್ಯಾನ್
ರಿಯಾದ್,ಆ.7: ತನ್ನನ್ನು ಅವಹೇಳನಕಾರಿಯಾಗಿ ಬಯ್ದ ಮಹಿಳೆಯ ಹೊಟ್ಟೆ, ಎದೆ, ಹಿಂಭಾಗ ಹಾಗೂ ಕುತ್ತಿಗೆಗೆ ಕಾವಲುಗಾರನೊಬ್ಬ 66 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ವೇಳೆ ಬಹಿರಂಗವಾಗಿದೆ.
ಆಕೆಯನ್ನು ಕೊಲೆ ಮಾಡಿದ ಬಳಿಕ 24 ವರ್ಷದ ಈ ಪಾಕಿಸ್ತಾನಿ ಕಾವಲುಗಾರ, ಮಹಿಳೆ ತನ್ನ ಸ್ನೇಹಿತನ ಜತೆ ವಾಸವಾಗಿದ್ದ ಫ್ಲಾಟ್‌ನಿಂದ ಹೊರಬಂದು ಕೈಕಾಲು ತೊಳೆದುಕೊಂಡು ಬಟ್ಟೆಗಳನ್ನು ಬದಲಿಸಿದ. ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಹಾಗೂ ಆಂಬುಲೆನ್ಸ್ ಆಗಮಿಸುವ ವೇಳೆಗೆ ಮತ್ತೆ ಅಲ್ಲಿಗೆ ಆರೋಪಿ ಹಾಜರಾದ. ಆರೋಪಿಯ ವಿರುದ್ಧ ಕಳ್ಳತನ ಹಾಗೂ ಹತ್ಯೆಯ ಆರೋಪ ಹೊರಿಸಲಾಗಿದೆ. ಹತ್ಯೆ ಆರೋಪವನ್ನು ನ್ಯಾಯಾಲಯದಲ್ಲಿ ಅಲ್ಲಗಳೆದ ಆರೋಪಿ, ಆಕೆಯನ್ನು ಕೊಲೆ ಮಾಡುವ ಉದ್ದೇಶ ತನಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ಮಹಿಳೆಯ ದೇಹದಲ್ಲಿ 66 ಇರಿತದ ಗಾಯಗಳಾಗಿರುವುದನ್ನು ವಿಧಿವಿಜ್ಞಾನ ಪ್ರಯೋಗಾಲಯ ವರದಿ ಖಚಿತಪಡಿಸಿದೆ. ಆಕೆಯ ಶ್ವಾಸಕೋಶ, ಎದೆ ಹಾಗೂ ಲಿವರ್‌ಗೆ ಇರಿತದಿಂದ ತೀವ್ರ ಗಾಯಗಳಾಗಿದ್ದು, ಈ ಕಾರಣದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ವರದಿ ಹೇಳಿದೆ.
ಕಳೆದ ಫೆಬ್ರವರಿ 18ರಂದು ಫ್ಲಾಟ್ ಬಳಿಯ ಕಾರಿಡಾರ್ ಸ್ವಚ್ಛಗೊಳಿಸುತ್ತಿದ್ದಾಗ, ಅಲ್ಲಿಗೆ ಬಾರದಂತೆ ಮಹಿಳೆಗೆ ಹೇಳಿದರೂ ಆಕೆ ಕೇಳಲಿಲ್ಲ. ಆಕೆ ಹೀನಾಯಮಾನವಾಗಿ ಬಯ್ದು ನೀರಿನ ಬಕೆಟ್ ಒದ್ದಳು. ಆಕೆಯ ಮೇಲೆ ಸಿಟ್ಟಿನಿಂದ ಆಕೆಯ ಮೇಲೆ ದಾಳಿ ಎಸಗಲು ಯೋಚಿಸಿದ್ದೆ. ಮಧ್ಯಾಹ್ನದ ವೇಳೆಗೆ ಫ್ಲಾಟ್‌ನ ಅಗ್ನಿಸುರಕ್ಷಾ ಅಲರಾಂ ಬಾರಿಸುವ ನೆಪದಲ್ಲಿ ಆಕೆಯ ಫ್ಲಾಟ್‌ಗೆ ಹೋಗಿ ಚಾಕುವಿನಿಂದ ದಾಳಿ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಎರಡು ಬಾರಿ ಆಕೆಯ ಹೊಟ್ಟೆಗೆ ಇರಿದಾಗ ಕಿಟಕಿ ಮೂಲಕ ಕೂಗಿಕೊಳ್ಳಲು ಆಕೆ ಮುಂದಾದಳು. ಆಗ ಆಕೆಯ ಬಾಯಿಯನ್ನು ಮುಚ್ಚಿ ಮತ್ತೆ ಇರಿದದ್ದಾಗಿ ಆರೋಪಿ ಘಟನೆಯನ್ನು ವಿವರಿಸಿದ್ದಾನೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 23ಕ್ಕೆ ಮುಂದೂಡಿದೆ.