×
Ad

ಶಾರ್ಜ: ಅಂಗಡಿ ಕೊಳ್ಳೆ ಹೊಡೆಯುತ್ತಿದ್ದ ಆಫ್ರಿಕನ್ ಗ್ಯಾಂಗ್ ಸೆರೆ

Update: 2016-08-09 15:55 IST

ಶಾರ್ಜ,ಆ.9: ಅಂಗಡಿಗಳ ಬೀಗವನ್ನು ಒಡೆದು ಕಳ್ಳತನ ನಡೆಸುತ್ತಿದ್ದ ಆರು ಮಂದಿ ಆಫ್ರಿಕನ್ ಕಳ್ಳರ ತಂಡವನ್ನು ಶಾರ್ಜ ಪೊಲೀಸ್ ಗುಪ್ತಚರ ದಳ ಬಂಧಿಸಿದೆ. ರಾತ್ರಿಯ ವೇಳೆ ಮುಚ್ಚಿರುವ ಅಂಗಡಿಗಳ ಬೀಗ ಒಡೆದು ಕಳ್ಳತನ ನಡೆಸುವುದರಲ್ಲಿ ಈ ತಂಡ ನೈಪುಣ್ಯಗಳಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಶಾರ್ಜ ಪೊಲೀಸರಿಗೆ ಹಲವು ಅಂಗಡಿಗಳು ಕಳ್ಳತನವಾದ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರೂಪಿಸಿ ಕಳ್ಳರ ಪ್ರತಿಯೊಂದ ಚಲನವಲನವನ್ನು ಅತೀ ಎಚ್ಚರಿಕೆಯಿಂದ ಗಮನಿಸಿ ಕೊನೆಗೂ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸಲಾಗಿದೆ. ಪ್ರತಿಯೊಂದು ಅಂಗಡಿ, ಸಂಸ್ಥೆಗಳು ಸುರಕ್ಷೆಗಾಗಿ ಸಿಸಿಕ್ಯಾಮರಾಗಳನ್ನುಅಳವಡಿಸಿಕೊಳ್ಳಬೇಕೆಂದು ಪರವಾನಿಗೆಯಲ್ಲಿ ಶರ್ತ ವಿಧಿಸಲಾಗುತ್ತದೆ. ಹೆಚ್ಚಿನ ಅಂಗಡಿ, ಸಂಸ್ಥೆಗಳು ಇದನ್ನು ಪಾಲಿಸದಿರುವುದು ಕಳ್ಳರಿಗೆ ಕಳ್ಳತನ ಎಸಗಲು ಸುಲಭವಾಗುತ್ತಿದೆಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News