ದುಬೈ: ದಾರುನ್ನೂರ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ದುಬೈ, ಆ.11: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಬೆಳ್ತಂಗಡಿ ತಾಲೂಕು ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ವರ್ಷದ ಪವಿತ್ರ ಹಜ್ ಕರ್ಮ ನೆರವೇರಿಸಲು ಹೊರಟಿರುವ ದಾರುನ್ನೂರಿನ ಪ್ರಮುಖರಾದ ಸಾಜಿದ್ ಬಜ್ಪೆ ಮತ್ತು ನವಾಝ್ ಕೋಟೆಕಾರ್‌ರಿಗೆ ಬೀಳ್ಕೊಡುಗೆ ಸಮಾರಂಭವನ್ನು ದುಬೈಯ ಕಿಸೈಸ್‌ನಲ್ಲಿರುವ ಮುಸ್ತಾಕ್ ಮುಹಮ್ಮದ್ ತೋಡಾರ್‌ರ ನಿವಾಸದಲ್ಲಿ ಏರ್ಪಡಿಸಲಾಗಿತ್ತು.
ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಮಾತನಾಡಿ, ಹಜ್ ಯಾತ್ರಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಎಲ್ಲರ ಸಹಕಾರ ದಾರುನ್ನೂರ್ ಕುಟುಂಬದಲ್ಲಿ ಮುಖ್ಯವಾಗಿದ್ದು ಅನ್ಯೋನ್ಯತೆಯೇ ನಮ್ಮ ಯಶಸ್ಸಿನ ಹಿಂದಿನ ರಹಸ್ಯ ಎನ್ನುತ್ತಾ ಎಲ್ಲರಿಗೂ ಹಜ್ ಕರ್ಮ ನಿರ್ವಹಿಸುವ ಭಾಗ್ಯವನ್ನು ಅಲ್ಲಾಹು ನೀಡಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಬ್ದುಸ್ಸಲಾಂ ಬಪ್ಪಳಿಗೆ, ಸಮೀರ್ ಇಬ್ರಾಹೀಂ ಕಲ್ಲರೆ , ಮುಹಮ್ಮದ್ ರಫೀಕ್ ಸುರತ್ಕಲ್, ಹಮೀದ್ ಮನಿಲ, ಸಫಾ ಇಸ್ಮಾಯೀಲ್ ಬಜ್ಪೆ, ಇಮ್ರಾನ್ ಮಜಿಲೋಡಿ, ನವಾಝ್ ಬಿ.ಸಿ.ರೋಡ್, ಮುಷ್ತಾಕ್ ತೋಡಾರ್ ಮೊದಲಾದವರು ಮಾತನಾಡಿದರು.
ಈ ಸಂದರ್ಭ ಹಜ್ ಯಾತ್ರಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನವಾಝ್ ಕೋಟೆಕಾರ್ ಮತ್ತು ಸಾಜಿದ್ ಬಜ್ಪೆ ಮಾತನಾಡಿ ದಾರುನ್ನೂರ್‌ಗೆ ತಮ್ಮ ಸಹಕಾರ ಎಂದಿಗೂ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಬ್ದುಲ್ ರಹ್ಮಾನ್ ಸಜೀಪ ಮಾತನಾಡಿ, ಪ್ರವಾದಿಯವರ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿ ಕೊಂಡು ನಾವು ಮುಂದುವರಿದರೆ ಯಶಸ್ಸು ಖಂಡಿತಾ ನಮ್ಮೊಂದಿಗಿರುತ್ತದೆ ಎಂದು ದಾರುನ್ನೂರ್ ಕಾರ್ಯಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಾರುನ್ನೂರ್‌ನ ಉಪಾಧ್ಯಕ್ಷ ಕೆ.ಹನೀಫ್ ಮೂಡುಬಿದಿರೆ, ಅಬೂಹೈಲ್ ಶಾಖೆಯ ಗೌರವಾಧ್ಯಕ್ಷ ಸಲೀಂ ಮಿತ್ತೂರು, ಕಿಸೈಸ್ ಶಾಖೆಯ ಕೋಶಾಧಿಕಾರಿ ಸಂಶುದ್ದೀನ್ ಮೂಡುಬಿದಿರೆ ಮೊದಲಾದವರು ಉಪಸ್ಥಿತರಿದ್ದರು.
ದಾರುನ್ನೂರ್‌ನ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಆತೂರ್ ಸ್ವಾಗತಿಸಿದರು. ಅನ್ಸಾಫ್ ಪಾತೂರು ವಂದಿಸಿದರು.