ಕತರ್‌ನಲ್ಲಿ ಸಚಿವ ಯು.ಟಿ.ಖಾದರ್
Update: 2016-08-12 11:26 IST
ಕತರ್, ಆ.12: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್‌ನ ಮುಖವಾಣಿ ‘ಗಲ್ಫ್ ಇಶಾರ’ದ ಕತರ್ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಕರ್ನಾಟಕ ಆಹಾರ ಸಚಿವ ಯು.ಟಿ.ಖಾದರ್‌ರರನ್ನು ಕರ್ನಾಟಕ ಕಲ್ಚರಲ್ ಫೋರಂ(ಕೆಸಿಎಫ್)ನ ಕಾರ್ಯಕರ್ತರು ಕತರ್ ವಿಮಾನ ನಿಲ್ದಾಣದಲ್ಲಿಂದು ಬೆಳಗ್ಗೆ ಆತ್ಮೀಯವಾಗಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಬಿ.ಕೆ.ಅಬ್ದುಲ್ ಜಬ್ಬಾರ್ ಬೋಳಿಯಾರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಕತರ್‌ನ ಕೆಸಿಎಫ್ ಆಯೋಜಿಸಿರುವ ಈ ಕಾರ್ಯಕ್ರಮವು ದೋಹಾದ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಇಂದು ಅಪರಾಹ್ನ 2 ಗಂಟೆಗೆ ನಡೆಯಲಿದೆ.