×
Ad

ಕುವೈಟ್: ಶುವೈಖ್ ಬಂದರಿನಲ್ಲಿ 11 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಮಾದಕವಸ್ತು ಶೇಖರಣೆ ಪತ್ತೆ

Update: 2016-08-12 14:22 IST

ಕುವೈಟ್ ಸಿಟಿ,ಆ.12: ಶುವೈಖ್ ಬಂದರಿನಲ್ಲಿ 11 ಮಿಲಿಯನ್ ಅಮೆರಿಕನ್ ಡಾರ್ ಮೌಲ್ಯದ ಮಾದಕವಸ್ತು ಮಾತ್ರೆಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು, ಒಬ್ಬ ಸೌದಿಪ್ರಜೆ, ಇನ್ನೊಬ್ಬ ಸಿರಿಯದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಯುರೋಪಿಯನ್ ದೇಶವಾದ ಉಕ್ರೇನ್‌ನಿಂದ ಶುವೈಕ್ ಬಂದರಿಗೆ ಬಂದಿದ್ದ ಹಡಗಿನಲ್ಲಿ ಕಲ್ಲಿದ್ದಲಿನ ಚೀಲದಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಾಟ ಮಾಡಲು ಇವರು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗೃಹ ಸಚಿವಾಲಯಕ್ಕೆ ಲಭಿಸಿದ ರಹಸ್ಯ ಮಾಹಿತಿಯ ಆಧಾರದಲ್ಲಿ ನಡೆಸಿದ ದಾಳಿಯಲ್ಲಿ ಹಡಗಿನ ಎರಡು ಕಂಟೈನರ್‌ಗಳಲ್ಲಿ ಕಲ್ಲಿದ್ದಲಿನ ಚೀಲಗಳಲ್ಲಿ ಅಡಗಿಸಿಟ್ಟಿದ್ದು ಕಂಡು ಬಂದಿತ್ತು. ಬಂಧಿಸಲಾದ ಸೌದಿ ಪ್ರಜೆ ಮತ್ತು ಸಿರಿಯದ ಪ್ರಜೆ ಅಂತಾರಾಷ್ಟ್ರೀಯ ಮಾದಕವಸ್ತು ಲಾಬಿಯ ಕೊಂಡಿಗಳೆಂದು ಪೊಲೀಸರು ತಿಳಿಸಿದ್ದು, ಇವರು ಕುವೈಟ್‌ಗೆ ಮಾದಕವಸ್ತುಗಳನ್ನು ತಲುಪಿಸುವ ಏಜೆಂಟಗಳಾಗಿದ್ದಾರೆಂದು ಪೊಲೀಸರು ಅಂದಾಜಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಇವರಿಬ್ಬರನ್ನು ವಿಶೇಷ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News