×
Ad

300 ಮಂದಿಗೆ ಪೌರತ್ವ ನೀಡಿದ ಕುವೈಟ್

Update: 2016-08-13 17:04 IST

ಕುವೈಟ್, ಆ.13: ಕುವೈಟ್ ಅಮೀರ್‌ರ ವಿಶೇಷ ಆದೇಶದಂತೆ 300 ಮಂದಿಗೆ ಕುವೈಟ್‌ನ ಪೌರತ್ವವನ್ನು ನೀಡಲಾಗಿದೆ ಎಂದು ವರದಿಯಾಗಿದೆ. ವಿದೇಶಿ ಪ್ರಜೆಗಳನ್ನು ಮದುವೆಯಾದ ಕುವೈಟ್ ವಿಧವೆಯರು ಮತ್ತು ವಿವಾಹವಿಚ್ಛೇದನಗೊಂಡವರ 180 ಮಕ್ಕಳು ಸಹಿತ ಮುನ್ನೂರು ಮಂದಿಗೆ ಪೌರತ್ವವನ್ನು ನೀಡಲಾಗಿದೆ ಎಂದು ಗ್ರಹಸಚಿವ ಶೇಕ್ ಮುಹಮ್ಮದ್ ಖಾಲಿದ್ ಅಲ್ ಹಮದ್ ಅಸ್ಸಬಾಹ್ ಹೇಳಿದ್ದಾರೆಂದು ವರದಿಯಾಗಿದೆ.

 ಆದರೆ, ಈ ತೀರ್ಮಾನವನ್ನು ಅಧಿಕೃತವಾಗಿ ಇನ್ನಷ್ಟೇ ಪ್ರಕಟಿಸಬೇಕಾಗಿದ್ದು, ಮುಂದಿನ ವಾರ ನಡೆಯಲಿರುವ ಸಚಿವಸಂಪುಟದ ಸಭೆಯ ನಂತರ ಈಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ. ಸಚಿವರು, ಹೊಸ ಪೌರತ್ವಗಳಿಸಿದವರಿಗೆ ಸಂಬಂಧಿಸಿದ ಪಾಸ್‌ಪೋರ್ಟ್ ನೀಡುವಿಕೆ ಮುಂತಾದ ವಿಷಯಗಳ ಕುರಿತು ಅಧಿಕಾರಿಗಳಿಂದ ಕೇಳಿ ತಿಳಿದು ಕೊಂಡಿದ್ದು, ದಕ್ಷವಾಗಿ ಕೆಲಸ ನಿರ್ವಹಿಸಬೇಕೆಂದು ಅವರಿಗೆ ಸೂಚಿಸಿದ್ದಾರೆ. ವಿಶೇಷ ಪರಿಗಣನೆ ನೀಡುವ ಅಗತ್ಯವಿರುವವರೊಂದಿಗೆ ಅನುಕಂಪದಿಂದ ವರ್ತಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News