×
Ad

ವರ್ಷಗಳ ಚಿಕಿತ್ಸೆಯ ಬಳಿಕ ಹುಟ್ಟಿದ ಮಗು ತಂದೆಯ ವಾಹನದಡಿ ಸಿಲುಕಿ ಸಾವು !

Update: 2016-08-13 17:22 IST

ದುಬೈ, ಆ.13: 18 ತಿಂಗಳ ಮಗುವೊಂದು ತಂದೆಯ ವಾಹನದಡಿ ಸಿಲುಕಿ ಮೃತಪಟ್ಟ ದಾರುಣ ಘಟನೆ ದುಬೈನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
 ಕೇರಳ ಮೂಲದ ಅಬಿದ್ ಎಂಬುವವರು ಹಾರ್ ಅಲ್ ಅಂಝ್ ಪ್ರದೇಶದಲ್ಲಿರುವ ತಮ್ಮ ವಿಲ್ಲಾದ ಎದುರುಗಡೆ ಪಾರ್ಕಿಂಗ್ ಮಾಡಿದ್ದ ತಮ್ಮ ವಾಹನವನ್ನು ಹಿಂದಕ್ಕೆ ತೆಗೆಯುತ್ತಿದ್ದ ಸಂದರ್ಭ ಅವರ ಪುತ್ರಿ ಸಾಮಾ ತಕ್ಷಣವೇ ವಾಹನದತ್ತ ಓಡಿ ಬಂದ ಪರಿಣಾಮ ಈ ಘಟನೆ ನಡೆದಿದೆ. ಮಗು ಕಾರಿನತ್ತ ಓಡಿ ಬರುತ್ತಿದ್ದನ್ನು ಅಬಿದ್ ಗಮನಿಸಿರಲಿಲ್ಲ ಅಬಿದ್ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಅಬಿದ್ ಹಾಗೂ ಅವರ ಪತ್ನಿಗೆ ಮದುವೆಯಾಗಿ ದೀರ್ಘ ಸಮಯ ಮಕ್ಕಳಿರಲಿಲ್ಲ. ವರ್ಷಗಳ ಚಿಕಿತ್ಸೆಯ ಬಳಿಕ ಹೆಣ್ಣು ಮಗು ಜನಿಸಿತ್ತು ಎಂದು ಸಂಬಂಧಿಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News