×
Ad

ಸೌದಿ ಅರೇಬಿಯ: ಮನೆಕೆಲಸದ ಮಹಿಳೆಯರನ್ನು ಶಾಪಿಂಗ್ ಮಾಲ್‌ನಲ್ಲಿ ಪ್ರದರ್ಶಿಸಿದ ಕಂಪೆನಿ ವಿರುದ್ಧ ಕ್ರಮ

Update: 2016-08-15 12:21 IST

ರಿಯಾದ್, ಅ.15: ಮನೆಕೆಲಸದ ಮಹಿಳೆಯರನ್ನು ಒಪ್ಪಂದದ ಮೂಲಕ ಕೆಲಸಕ್ಕೆ ಒದಗಿಸಿಕೊಡುವ ಪ್ರಯುಕ್ತ ಶಾಪಿಂಗ್ ಮಾಲ್‌ನಲ್ಲಿ ಪ್ರದರ್ಶಿಸಿದ ರಿಕ್ರ್ಯೂಟ್ ಕಂಪೆನಿ ವಿರುದ್ಧ ಕ್ರಮಕ್ಕೆ ಸೌದಿ ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಸಚಿವಾಲಯ ಮುಂದಾಗಿದೆ. ಹೀಗೆ ಮಾಡಿದ ಕಂಪೆನಿಗಳ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಸಚಿವಾಲಯದ ವಕ್ತಾರ ಖಾಲಿದ್ ಅಬಲ್‌ಖೈಲ್ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

    ಸಚಿವಾಲಯದ ಪರವಾನಿಗೆ ಹೊಂದಿರುವ ರಿಕ್ರ್ಯೂಟಿಂಗ್ ಕಂಪೆನಿಗಳು ಮನೆಕೆಲಸದ ಮಹಿಳೆಯರನ್ನು ತಿಂಗಳು, ಮತ್ತು ಗಂಟೆಗಳ ಕೆಲಸ ಅವಧಿ ಎಂಬ ಎರಡು ರೀತಿಯ ಒಪ್ಪಂದದ ಮೂಲಕ ಒದಗಿಸುವ ಅನುಮತಿಯನ್ನು ಪಡೆದಿವೆ. ಆದರೆ ಇಂತಹ ಮಹಿಳೆಯರ ಪ್ರದರ್ಶನವನ್ನು ಏರ್ಪಡಿಸುವುದು ಕಾನೂನು ಬಾಹಿರವಾಗಿದೆ. ಸೌದಿ ಪೂರ್ವ ಪ್ರಾಂತದ ಡೆಹ್ರಾನ್ ಎಂಬಲ್ಲಿನ ಶಾಪಿಂಗ್ ಮಾಲ್‌ಒಂದರಲ್ಲಿ ಮೂವರು ಮನೆಕೆಲಸದ ಮಹಿಳೆಯರನ್ನು ಕಂಪೆನಿಯ ಬ್ಯಾನರ್ ಇಟ್ಟು ಪ್ರದರ್ಶಿಸಿ ಒಪ್ಪಂದ ಮಾಡಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸೌದಿ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News