×
Ad

ದುಬೈ: ಎಂಟು ವರ್ಷದ ಬಾಲಕನ ಅತ್ಯಾಚಾರ, ಕೊಲೆ ಪ್ರಕರಣ : ಜೋರ್ಡಾನ್ ಪ್ರಜೆಗೆ ಮರಣದಂಡನೆ

Update: 2016-08-15 20:01 IST

   ದುಬೈ,ಆ.15: ಯುಎಇನಲ್ಲೇ ಭಾರೀ ಕೋಲಾಹಲವನ್ನು ಸೃಷ್ಟಿಸಿದ್ದ ಎಂಟು ವರ್ಷದ ಬಾಲಕನೊಬ್ಬನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯಾದ ಜೋರ್ಡಾನ್ ಮೂಲದ ವ್ಯಕ್ತಿಗೆ ದುಬೈನ ನ್ಯಾಯಾಲಯವೊಂದು ಸೋಮವಾರ ಮರಣದಂಡನೆಯನ್ನು ಘೋಷಿಸಿದೆ.

 49 ವರ್ಷ ವಯಸ್ಸಿನ ನಿದಾಲ್ ಇಸಾ ಅಬ್ದುಲ್ಲಾ ಎಂಬಾ ಮೇ 20ರಂದು ಒಬೈದಾ ಸಿದ್ದೀಕಿ ಎಂಬ ಬಾಲಕನನ್ನು ಆತನ ತಂದೆಯ ಗ್ಯಾರೇಜ್‌ನಿಂದ ಅಪಹರಿಸಿ, ಆತನ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆತನ ಕೊಲೆ ಮಾಡಿದ್ದ. ಅಪರಾಧಿ ಇಸಾ ಅಬ್ದುಲ್ಲಾ ಮೃತಪಟ್ಟ ಬಾಲಕನ ಪೋಷಕರಿಗೆ 21 ಸಾವಿರ ದಿರ್ರಾಮ್‌ಗಳ ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

  ಜೋರ್ಡಾನ್ ಮೂಲದವನೇ ಆದ ಬಾಲಕನನ್ನು ಅತ್ಯಾಚಾರಗೈದ ಬಳಿಕ ಕೊಲೆ ಮಾಡಿದ್ದನ್ನು ಅಬ್ದುಲ್ಲಾ ಒಪ್ಪಿಕೊಂಡಿದ್ದ. ಆದರೆ ತಾನು ಆತನನ್ನು ಅಪಹರಿಸಿಲ್ಲವೆಂದು ಆತ ಸ್ಪಷ್ಟಪಡಿಸಿದ್ದನೆಂದು ದುಬೈ ಡೈಲಿ ಪತ್ರಿಕೆ ತಿಳಿಸಿದೆ. ಅಬ್ದುಲ್ಲಾನು ಎಂಟು ವರ್ಷದ ಬಾಲಕನಿಗೆ ಸ್ಕೂಟರ್ ಕೊಡಿಸುವ ಅಮಿಷವೊಡ್ಡಿ ತ್ನ ಕಾರಿನಲ್ಲಿ ಹತ್ತಿಸಿಕೊಂಡಿದ್ದ. ಅತನ ಮೇಲೆ ಅತ್ಯಾಚಾರವೆಸಗಿದ ಬಳಿಕ ಕತ್ತುಹಿಸುಕಿ ಕೊಲೆ ಮಾಡಿದ್ದನೆಂದು ಆರೋಪಿಸಲಾಗಿತ್ತು. ಆದರೆ ನ್ಯಾಯಾಲಯದ ಆಲಿಕೆಯ ವೇಳೆ ಅಬ್ದುಲ್ಲಾ, ತನಗೆ ಮಾನಸಿಕ ಸಮಸ್ಯೆಗಳಿರುವುದಾಗಿ ತಿಳಿಸಿದ್ದ.

 ಯುಎಇನ ಕಾನೂನಿನಲ್ಲಿ ಮರಣದಂನೆಗೆ ಅವಕಾಶವಿದೆಯಾದರೂ, ಅದನ್ನು ಜಾರಿಗೊಳಿಸುವುದು ತೀರಾ ಅಪರೂಪವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News