×
Ad

ದುಬೈ: ದಾರುನ್ನೂರ್ ಮುಖಂಡರಿಗೆ ಸ್ವಾಗತ

Update: 2016-08-18 18:11 IST

ದುಬೈ, ಆ.18: ಮೂಡುಬಿದಿರೆ ಕಾಶಿಪಟ್ಣದ ದಾರುನ್ನೂರ್ ಎಜುಕೇಷನ್ ಸೆಂಟರ್‌ನ ಯುಎಇ ರಾಷ್ಟ್ರೀಯ ಸಮಿತಿಯ ಎರಡನೆ ವಾರ್ಷಿಕ ಮಹಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು ಮತ್ತು ಕೋಶಾಧಿಕಾರಿ ಇಸ್ಮಾಯೀಲ್ ಹಾಜಿ ಕಲ್ಲಡ್ಕ ಅವರಿಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.

ಯುಎಇಯಲ್ಲಿ ಎರಡು ವರ್ಷಗಳಿಂದ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ವಿದ್ಯಾ ಸಂಸ್ಥೆಯ ಸಮಿತಿಯು ಮೂರನೆ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಸಂದರ್ಭ ದಾರುನ್ನೂರ್ ಯುಎಇ ಇದರ ಅಧ್ಯಕ್ಷ ಸಲೀಂ ಅಲ್ತಾಫ್ ಪರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್, ಕೋಶಾಧಿಕಾರಿ ಅಬ್ದುಸ್ಸಲಾಂ ಬಪ್ಪಳಿಗೆ, ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಆತೂರು, ಕಾರ್ಯದರ್ಶಿ ಸಮೀರ್ ಇಬ್ರಾಹೀಂ ಕಲ್ಲರೆ , ಉಪಾಧ್ಯಕ್ಷ ನವಾಝ್ ಬಿ.ಸಿ.ರೋಡ್, ಸಂಘಟನಾ ಕಾರ್ಯದರ್ಶಿ ಹಮೀದ್ ಮನಿಲ, ಲೆಕ್ಕ ಪರಿಶೋಧಕ ಮುಷ್ತಾಕ್ ಮುಹಮ್ಮದ್ ತೋಡಾರ್, ಕುರೈಶ್ ಕಲ್ಲಡ್ಕ, ಶಾಹುಲ್ ಹಮೀದ್ ಬಿ. ಅತೂರ್ ಮತ್ತಿತರರು ಉಪಸ್ಥಿತರಿದ್ದರು.

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News