ಅಕ್ಟೋಬರ್ ನಲ್ಲಿ ಅರಬ್ ಪ್ರೀಮಿಯರ್ ಲೀಗ್ ಹಬ್ಬ

Update: 2016-08-19 14:28 GMT

ಯುಎಇ, ಆ.19: ಇಲ್ಲಿನ ಟೀಮ್ ದುಬೈ ಇಂಡಿಯನ್ಸ್ ಟೆನ್ನಿಸ್ ಬಾಲ್ ಕ್ರಿಕೆಟ್ ಉತ್ಸವ ‘ಅರಬ್ ಪ್ರೀಮಿಯರ್ ಲೀಗ್ (ಎಪಿಎಲ್)’ 2016ನ್ನು ಆಯೋಜಿಸಲು ಮುಂದಾಗಿದೆ. ಅಜ್ಮಾನ್ ಯುವ ಮತ್ತು ಕ್ರೀಡಾ ಪ್ರಾಧಿಕಾರದ ಸಹಯೋಗದೊಂದಿಗೆ ಅಜ್ಮಾನ್ ಓವಲ್ನಲ್ಲಿ ಅ.11ರಿಂದ 14ರವರೆಗೆ ಈ ಕ್ರೀಡಾಕೂಟ ನಡೆಯಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅರಬ್ ಪ್ರೀಮಿಯರ್ ಲೀಗ್ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಮೆಂಟ್ 2,00,000 ಎಇಡಿ (36,45,397 ರೂ.) ಬಹುಮಾನವನ್ನು ಹೊಂದಿದೆ. ಸುಮಾರು 11 ಏಷ್ಯಾ ರಾಷ್ಟ್ರಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಅಲ್ಲದೆ ಯುರೋಪಿಯನ್ ದೇಶವಾದ ಫಿನ್ಲ್ಯಾಂಡ್ನ ತಂಡ ಇದೇ ಮೊದಲ ಬಾರಿಗೆ ಯುಎಇಯಲ್ಲಿ ಆಟವಾಡುತ್ತಿದೆ.

ಬಹುಮಾನ ವಿವರ

ವಿಜೇತರಿಗೆ: ಎಇಡಿ 111,111 (20,25,000 ರೂ.), ಅರಬ್ ಪ್ರೀಮಿಯರ್ ಲೀಗ್ ಟ್ರೋಫಿ
ದ್ವಿತೀಯ ಬಹುಮಾನ: ಎಇಡಿ 50,000 ಎಇಡಿ (9,11,000 ರೂ.), ಅರಬ್ ಪ್ರೀಮಿಯರ್ ಲೀಗ್ ಟ್ರೋಫಿ

ಮ್ಯಾನ್ ಆಫ್ ದ ಸೀರೀಸ್: ಎಇಡಿ 5,000 ಮ್ಯಾನ್ ಆಫ್ ದ ಮ್ಯಾಚ್ (ಪ್ರತಿ ಪಂದ್ಯ)/ ಬೆಸ್ಟ್ ಬ್ಯಾಟ್ಸ್ ಮ್ಯಾನ್/ ಬೆಸ್ಟ್ ಬೌಲರ್/ ಬೆಸ್ಟ್ ಕ್ಯಾಚ್ ಬಹುಮಾನಗಳೂ ಇರುತ್ತವೆ.

4 ದಿನಗಳ ಈ ಕ್ರೀಡಾಕೂಟದಲ್ಲಿ ದೇಶೀ ಶೈಲಿಯ ಎಲ್ಲ ರೀತಿಯ ಮನೋರಂಜನೆಗಳಿರುತ್ತವೆ. ಲೈವ್ ವಿಡಿಯೊ ಆನಲೈನ್ ಪ್ರಸಾರವೂ ಇರುತ್ತದೆ. www.tenniscricket.in ನಲ್ಲಿ ಲೈವ್ ವೆಬ್ ವಿಡಿಯೊ ಪ್ರಸಾರವಿರುತ್ತದೆ ಮತ್ತು www.famecrick.comನಲ್ಲಿ ಲೈವ್ ಸ್ಕೋರಿಂಗ್ ಮಾಹಿತಿ ಲಭ್ಯವಿರುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅರಬ್ ಪ್ರೀಮಿಯರ್ ಲೀಗ್ ನ ಅಧ್ಯಕ್ಷ ಆಫ್ರೋಝ್ ಅಸಾದಿ, ಟೀಂ ದುಬೈ ಇಂಡಿಯನ್ಸ್ ಅಧ್ಯಕ್ಷ ಇಮ್ರಾನ್ ಖಾನ್ ಎರ್ಮಾಳ್, ಎಪಿಎಲ್ ಶಿಸ್ತು ಸಮಿತಿ ಉಸ್ತುವಾರಿ ಆರಿಫ್ ಖಾನ್, ಟೀಂ ದುಬೈ ಪ್ರಧಾನ ಕಾರ್ಯದರ್ಶಿ ಯೂಸುಫ್ ಅನ್ಸಾರ್, ಅಬ್ದುರ್ರಹ್ಮಾನ್, ರಮೀಝ್ ಶಿರೂರ್, ಸೈಯದ್ ಸಲೀಂ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News