×
Ad

ದುಬೈ: ಗ್ಯಾಸ್ ಸಿಲಿಂಡರ್‌ಸ್ಫೋಟ - ಭಾರತೀಯ ವ್ಯಕ್ತಿ ಮೃತ್ಯು

Update: 2016-08-25 18:02 IST

ದುಬೈ,ಆಗಸ್ಟ್ 25: ಅಲ್‌ಕೈಲ್ ಗೇಟ್ ಎಂಬಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಪೋಟದಿಂದಾಗಿ ಗಾಯಗೊಂಡಿದ್ದ ಭಾರತೀಯ ವ್ಯಕ್ತಿ ಮೃತರಾಗಿದ್ದಾರೆಂದು ವರದಿಯಾಗಿದೆ. ರಾಷಿದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿರೀನ್ ಗಾಂಧಿ(63) ಗುರುವಾರ ಬೆಳಗ್ಗೆ ನಿಧನರಾದರು. ಗಾಯಗೊಂಡಿದ್ದ ಅವರ ಪುತ್ರಿ ಮರಿಯಂ ಗಾಂಧಿ ಅಪಾಯದಿಂದ ಪಾರಾಗಿದ್ದಾರೆಂದು ಆಕೆಯ ಪತಿ ಹುಸೈನ್ ಲಕಡ್‌ವಾಲ ತಿಳಿಸಿದ್ದಾರೆಂದು ವರದಿಯಾಗಿದೆ. ಮರಿಯಂ-ಹುಸೈನ್ ದಂಪತಿಗಳ ಒಂದು ವರ್ಷದ ಪುತ್ರಿ ಸಾರಾ ಲತೀಫಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

 ಬುಧವಾರ ಬೆಳಗ್ಗೆ ಅಲ್‌ಕುಸೂಸ್ ಅಲ್ ಖೈಲ್ ಗೇಟ್‌ನ ಫೇಸ್ ಒಂದರ 39ನೆ ನಂಬ್ರದ ಕಟ್ಟಡದ ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಸ್‌ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದಾಗಿ ಅಪಾರ್ಟ್‌ಮೆಂಟ್‌ನಲ್ಲಿ ಗೋಡೆ ಕುಸಿದಿತ್ತು. ಶಿರೀನ್ ಗಾಂಧಿ, ಮರಿಯಂ ಗಾಂಧಿಯನ್ನು ಗೋಡೆಯ ಅವಶೇಷಗಳಡಿಯಿಂದ ಹೊರತೆಗೆಯಲಾಗಿತ್ತು. ಕೆಳ ಅಂತಸ್ತಿನ ಬಾಲ್ಕನಿಗೂ ಹಾನಿಯಾಗಿದೆ ಎಂದು ಸಿವಿಲ್ ಡಿಫೆನ್ಸ್ ಪ್ರತಿನಿಧಿತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News