×
Ad

ಓಮನ್: ಓಸಿಪಿ ಕಾರ್ಪೊರೇಟ್ ಕಪ್ ಸಾರ್ಕೊ ತಂಡಕ್ಕೆ

Update: 2016-08-25 23:41 IST

ಮಸ್ಕತ್, ಆ.25: ಓಮನ್ ಕಾಂಕ್ರಿಟ್ ಪ್ರೋಡಕ್ಟ್ ಪ್ರಾಯೋಜಕತ್ವ ಮತ್ತು ಟ್ರಸ್ಟ್ ಕಾಂಟ್ರಕ್ಟಟಿಂಗ್ ಹಾಗೂ ರಮನಿಕ್‌ಲಾಲ್ ಕೊಟ್ಟಾರಿ ಸಹ ಪ್ರಾಯೋಜಕತ್ವದಲ್ಲಿ ನಡೆದ ಓಸಿಪಿ ಕಾರ್ಪೊರೇಟ್ ಕಪ್ ಟೆನ್ನಿಸ್ ಬಾಲ್ ಪಂದ್ಯಾವಳಿಯ 2 ನೆ ಆವೃತಿಯಲ್ಲಿ ಸಾರ್ಕೊ ಕ್ರಿಕೆಟ್ ತಂಡ ಜಯಗಳಿಸಿದೆ.

  ಪಂದ್ಯಾವಳಿಯಲ್ಲಿ ಭವನ್ ಇಂಜಿನಿಯರ್ ಕಂಪೆನಿ(ಬಿಇಸಿ),ಅಲ್ ತುರ್ಕಿ ,ಸ್ಪಿನ್ನಿಸ್,ಅಲ್ ಖಲೀಲಿ, ಇಬ್ನ್‌ಸಿನಾ ಫಾರ್ಮಸಿ , ಒಯಸಿಸ್ ಟ್ರೇಡಿಂಗ್, ಸಾರ್ಕೋ, ಪವರ್ ಟೆಕ್, ನ್ಯಾಷನಲ್ ಗ್ಯಾಸ್ ಸೇರಿದಂತೆ ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ್ದವು.

 ಆ.19ರ ಶುಕ್ರವಾರ ಎಚ್‌ಸಿಸಿ ವಾದಿ ಅದೈ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲ್ಲಿ ಸಾರ್ಕೊ ತಂಡವು ಬಿಇಸಿ ತಂಡವನ್ನು 20 ರನ್‌ಗಳ ಅಂತರದಲ್ಲಿ ಮಣಿಸಿತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸಾರ್ಕೊ ತಂಡವು 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 78ರನ್ ಕಲೆ ಹಾಕಿತು. ನಂತರ ಎದುರಾಳಿ ಬಿಇಸಿ ತಂಡ 58 ರನ್ ಮಾತ್ರ ಕಲೆ ಹಾಕಿ ಸೋಲನುಭವಿಸಿತು.ಸಾರ್ಕೊ ತಂಡದ ಪ್ರದೀಪ್ ಸಾಲ್ಯಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಬಿಇಸಿ ತಂಡದ ನಿತಿನ್ ಹೆಗ್ಡೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಗಿಟ್ಟಿಸಿಕೊಂಡರು.

ಸಾರ್ಕೊ ತಂಡದ ಗಿರೀಶ್ ತಿಂಗಳಾಯ ಪಂದ್ಯಾವಳಿಯ ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್‌ಆದರೆ,ಸಾರ್ಕೊ ತಂಡದ ಇನ್ನೊರ್ವ ಆಟಗಾರ ಜಿತೇಶ್ ಪೂಜಾರಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು. ಅಮೀರ್ ಸಂತೋಷ್,ಬಿನು,ಪ್ರವೀಣ್ ಆಚಾರಿ, ಹರೀಶ್‌ಶೆಟ್ಟಿ,ಇಮ್ರಾನ್ ಮನ್ನಾ ನೆರವಿನೊಂದಿಗೆ ಪಂದ್ಯಾಟವನ್ನು ಅಕ್ಷತ್‌ದಿವಿನ್ ಸಂಯೋಜಿಸಿದ್ದರು.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಓಸಿಪಿ ಕಂಪೆನಿಯ ಮಾರ್ಕೆಂಟಿಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಶೆಟ್ಟಿ, ಮತ್ತು ಹಣಕಾಸು ವ್ಯವಸ್ಥಾಪಕ ಈರಪ್ಪ ಉಪಸ್ಥಿತರಿದ್ದರು.ಹಾಲಿಡೇ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಫಿರೋಝ್ ಖಾನ್ ಸ್ವಾಗತಿಸಿ,ಪರ್‌ವಿಂದರ್ ಸಿಂಗ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News