ಕತರ್: ಅನಧಿಕೃತ ವಾಸಿಗಳಿಗೆ ಕ್ಷಮೆ ಘೋಷಣೆ

Update: 2016-08-26 05:40 GMT

ದೋಹ,ಆ.26: ಕತರ್‌ನಲ್ಲಿ ಅನಧಿಕೃತವಾಗಿ ವಾಸವಿರುವ ವಿದೇಶಿಯರಿಗೆ ಸರಕಾರ ಸಾರ್ವಜನಿಕ ಕ್ಷಮೆ ಘೋಷಿಸಿದೆ.ಮೂರು ತಿಂಗಳವರೆಗೆ ಇದು ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.ಮುಂದಿನ ತಿಂಗಳು ಒಂದನೆ ತಾರೀಕಿನಿಂದ ಇದು ಜಾರಿಗೆ ಬರಲಿದ್ದು, ನಿನ್ನೆ ರಾತ್ರೆ ಸಚಿವಾಲಯ ಸಾರ್ವಜನಿಕ ಘೋಷಣೆಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ಹಾಕಿದೆ ಎಂದು ವರದಿತಿಳಿಸಿದೆ.

ವೀಸಾ ಅವಧಿ ಮುಗಿದು ರೆಸಿಡೆಂಟ್ಸ್ ಪರ್ಮಿಟ್ ನವೀಕರಣಗೊಳಿಸದೆ ಕತರ್‌ನಲ್ಲಿ ಉಳಿದಿರುವವರು, ಕಾನೂನು ಬಾಹಿರವಾಗಿ ದೇಶಕ್ಕೆ ಪ್ರವೇಶಿಸಿದವರು ಸಾರ್ವಜನಿಕ ಕ್ಷಮೆಯ ಅವಧಿಯಲ್ಲಿ ತಮ್ಮ ದಾಖಲೆಗಳನ್ನು ಸರಿಪಡಿಸಿ ಕತರ್‌ನಿಂದ ಹೊರಹೋಗಲು ಅವಕಾಶವಿದೆ. ವಾಸ ವಲಸೆ ಕಾನೂನು ಉಲ್ಲಂಘಿಸಿದ ಕಾನೂನು ಕ್ರಮಗಳಿಲ್ಲದೆ ಊರಿಗೆ ಹೋಗಲು ಇದೊಂದು ಸದವಕಾಶ ಎಂಬ ಕಾರಣಕ್ಕಾಗಿ ಸಾರ್ವಜನಿಕ ಕ್ಷಮೆ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News