ಕುವೈಟ್: ಮೊದಲ ಹಂತದ ಇಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಬಂತು

Update: 2016-08-27 06:12 GMT

ಕುವೈಟ್‌ಸಿಟಿ,ಆಗಸ್ಟ್ 27: ಸ್ವದೇಶೀಯರಿಗಾಗಿ ಜರ್ಮನಿಯ ಪ್ರಮುಖ ಕಂಪೆನಿ ತಯಾರಿಸಿದ ಮೊದಲ ಹಂತದ ಇಲೆಕ್ಟ್ರಾನಿಕ್ ಪಾಸ್‌ಪೋರ್ಟ್‌ಗಳು ತಲುಪಿದ್ದು ಅದನ್ನು ಗ್ರಹಸಚಿವಾಲಯ ಸ್ವೀಕರಿಸಿದೆಯೆಂದು ವರದಿಯಾಗಿದೆ. ಸಚಿವಾಲಯದ ಪಾಸ್‌ಪೋರ್ಟ್-ಪೌರತ್ವ ವಿಷಯಗಳ ಅಧೀನ ಕಾರ್ಯದರ್ಶಿ ಮೇಜರ್‌ಜನರಲ್ ಮಾಝಿನ್ ಅಲ್ ಜರ್ರಾಹ್‌ರು ಈ ವಿಷಯವನ್ನು ತಿಳಿಸಿದ್ದಾರೆ. ಜರ್ಮನಿಯ ಕಂಪೆನಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲೆಕ್ಟ್ರಾನಿಕ್ ಪಾಸ್‌ಪೋರ್ಟ್‌ಗಳನ್ನು ಅಧಿಕೃತವಾಗಿ ಪಡೆದುಕೊಳ್ಳಲಾಗಿದೆ. ಆದರೆ ಮುಂದಿನ ವಾರ ಇದು ಕುವೈಟ್ ತಲುಪಲಿದೆ ಎಂದು ಜರ್ರಾಹ್ ತಿಳಿಸಿದ್ದಾರೆ. ಉಳಿದ ಪಾಸ್‌ಪೋರ್ಟ್‌ಗಳು ಕೂಡಾ ಮುಂದಿನ ತಿಂಗಳು ಕುವೈಟ್‌ಗೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News