ದುಬೈ: ದಾರುನ್ನೂರ್ ಕೇಂದ್ರ ಸಮಿತಿ ಮುಖಂಡರಿಗೆ ಬೀಳ್ಕೊಡುಗೆ

Update: 2016-08-28 12:39 GMT

ದುಬೈ, ಆ.28: ಮೂಡುಬಿದಿರೆ ಕಾಶಿಪಟ್ಣದ ದಾರುನ್ನೂರ್ ಎಜುಕೇಷನ್ ಸೆಂಟರ್‌ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ಇದರ 2ನೆ ವಾರ್ಷಿಕ ಮಹಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು ಮತ್ತು ಕೋಶಾಧಿಕಾರಿ ಇಸ್ಮಾಯೀಲ್ ಹಾಜಿ ಕಲ್ಲಡ್ಕರಿಗೆ ಬೀಳ್ಕೊಡುಗೆ ಸಮಾರಂಭ ಕಿಸೈಸ್‌ನಲ್ಲಿರುವ ಮುಸ್ತಾಕ್ ಮುಹಮ್ಮದ್ ತೋಡಾರ್‌ರ ನಿವಾಸದಲ್ಲಿ ನಡೆಯಿತು.

ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬದ್ರುದ್ದೀನ್ ಹೆಂತಾರ್, ಅಬ್ದುಸ್ಸಲಾಂ ಬಪ್ಪಳಿಗೆ, ಹಮೀದ್ ಮನಿಲ, ಸಂಶುದ್ದೀನ್ ಸೂರಲ್ಪಾಡಿ, ನವಾಝ್ ಬಿ.ಸಿ.ರೋಡ್, ಮುಹಮ್ಮದ್ ರಫೀಕ್ ಸುರತ್ಕಲ್, ಸಮೀರ್ ಇಬ್ರಾಹೀಂ ಕಲ್ಲರೆ, ಮುಸ್ತಾಕ್ ಮುಹಮ್ಮದ್ ತೋಡಾರ್, ಮುಹಮ್ಮದ್ ರಫೀಕ್ ಆತೂರ್, ಇಮ್ರಾನ್ ಮಜಿಲೋಡಿ, ಸಫಾ ಇಸ್ಮಾಯಿಲ್ ಬಜ್ಪೆ, ಕೆ.ಹನೀಫ್ ಮೂಡುಬಿದಿರೆ, ಅನ್ಸಾಫ್ ಪಾತೂರ್, ಇಲ್ಯಾಸ್ ಕಡಬ, ಸಂಶೀರ್ ಬಾಂಬಿಲ ಮೊದಲಾದವರು ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು, ದಾರುನ್ನೂರ್ ಒಂದು ಕುಟುಂಬದಂತಿದ್ದು, ಯಾರು ಹೃದಯದಲ್ಲಿ ವಿಶಾಲತೆಯನ್ನು ತೋರುತ್ತಾನೋ ಅವನೇ ದೊಡ್ಡ ಗುಣವಂತ. ಅಂತಹ ವ್ಯಕ್ತಿಗಳ ಮುಂದೆ ಹಣವಂತರಿಗೆ ಇರುವ ಸ್ಥಾನ ಕಮ್ಮಿ ಎಂದು ಹೇಳಿದರು.

ಕೇಂದ್ರ ಸಮಿತಿ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ಕಲ್ಲಡ್ಕ ಮಾತನಾಡಿ, ದಾರುನ್ನೂರಿನಲ್ಲಿ ಕಲಿಯುವ ಮಕ್ಕಳು ಪ್ರತಿಭಾವಂತರು. ಪ್ರಶಾಂತ, ಸುಂದರವಾದ ವಾತಾವರಣ ಮತ್ತು ಜಾತಿ ಮತ ಭೇದವಿಲ್ಲದ ಆ ಊರಿನ ಜನರ ಆತ್ಮೀಯತೆ ಮತ್ತು ಸಹಕಾರ ದಾರುನ್ನೂರನ್ನು ಯಾವ ಹಂತಕ್ಕೂ ಕೊಡೊಯ್ಯುವಲ್ಲಿ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಇಸ್ಮಾಯೀಲ್ ಹಾಜಿ ಕಲ್ಲಡ್ಕರ ಪುತ್ರ ಕುರೈಶ್ ಮತ್ತು ಅಳಿಯ ಬಿ.ಕೆ ಶಾಹುಲ್ ಉಪಸ್ಥಿತರಿದ್ದರು.

ವರದಿ: ಬದ್ರುದ್ದೀನ್ ಹೆಂತಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News