DKSC ದಮ್ಮಾಮ್ ವಲಯ ವತಿಯಿಂದ ಅಳಕೆಮಜಲು ಉಸ್ತಾದರಿಗೆ ಸನ್ಮಾನ ಹಾಗೂ ಕ್ಷೇಮನಿಧಿ ಸಮಿತಿಗೆ ಅಧಿಕೃತ ಚಾಲನೆ

Update: 2016-08-29 16:29 GMT

ಜುಬೈಲ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ದಮ್ಮಾಮ್ ವಲಯದ ವತಿಯಿಂದ ಸುನ್ನೀ ಗೈಡನ್ಸ್ ಬ್ಯೂರೊ ಅಧ್ಯಕ್ಷ ಬಹು ಮುಹಮ್ಮದ್ ಖಾಸಿಮಿ ಆಳಕೆಮಜಲು ಅವರ ಸನ್ಮಾನ ಸಮಾರಂಭ ಹಾಗೂ ಕ್ಷೇಮನಿಧಿ ಸಮಿತಿಗೆ ಅಧಿಕೃತ ಚಾಲನೆ ಮತ್ತು ನಿಯಾಮವಳಿ ಬಿಡುಗಡೆ ಸಮಾರಂಭ ಜುಬೈಲ್ DKSC  ಆಡಿಟೊರಿಯಂ ನಲ್ಲಿ ದಿನಾಂಕ 26.08.2016 ನೇ ಶುಕ್ರವಾರ ಮಧ್ಯಾಹ್ನ ನಡೆಯಿತು.

ಪ್ರಾರಂಭದಲ್ಲಿ ಅಬ್ದುಲ್ ಲತೀಫ್ ಸಖಾಫಿಯರ ದುವಾದೊಂದಿಗೆ ಆರಂಭಿಸಿದ ಸಭೆಯಲ್ಲಿ ಮಾಸ್ಟರ್ ಮುಹಮ್ಮದ್ ಮುಸ್ತಫಾ ಖಿರಾಅತ್ ಪಠಿಸಿದರು. ನಂತರ ವಲಯಾಧ್ಯಕ್ಷರಾದ ಸುಲೈಮಾನ್ ಸೂರಿಂಜೆ ಆಗಮಿಸಿದ ಗಣ್ಯರನ್ನು ಮುಕ್ತ ಕಂಠದಿಂದ ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಹಿರಿಯರಾದ ಕೇಂದ್ರ ಸಮಿತಿಯ ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಕಿನ್ಯ ನಿರ್ವಹಿಸಿದರು. ಕ್ಷೇಮನಿಧಿಯ ಅಧಿಕೃತ ಚಾಲನೆಯನ್ನು ಫ್ಲೆಕ್ಸ್ ಬಿಡಿಸುವ ಮುಖಾಂತರ ಉಸ್ತಾದ್ ಮುಹಮ್ಮದ್ ಖಾಸಿಮಿ, ವಲಯಾಧ್ಯಕ್ಷ ಸುಲೈಮಾನ್ ಸೂರಿಂಜೆ, ಪ್ರ ಕಾರ್ಯದರ್ಶಿ ಅಬೂಬಕ್ಕರ್ ಬರ್ವರವರು  ಕ್ಷೇಮನಿಧಿ ಅಧ್ಯಕ್ಷರಾದ ಹಾತೀಂ ಕಂಚಿ, ಪ್ರ. ಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್, ಸಲಹೆಗಾರರಾದ ಹಾತೀಂ ಕೂಳೂರ್ ರವರಿಗೆ ನೀಡುವ ಮೂಲಕ ಚಾಲನೆ ಕೊಟ್ಟರು. ನಿಯಮಾವಳಿ ಮತ್ತು ನಿಬಂಧನೆ ಪತ್ರವನ್ನು ಉಸ್ತಾದ್ ಮುಹಮ್ಮದ್ ಖಾಸಿಮಿ ಮತ್ತು ಕೋಬರ್ ಘಟಾಕಾಧ್ಯಕ್ಷ ಅಬ್ದುರ್ರಹ್ಮಾನ್ ಪಾಣಾಜೆಯವರು, ಹಿರಿಯ ಉದ್ಯಮಿ ಮಹಮ್ಮದ್ ಕಮ್ಮರಡಿಯವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿ, 
ಹಫ್ರುಲ್ ಬಾತಿನ್, ಅಲ್ ಹಸ್ಸಾ, ಅಲ್ ಕೋಬರ್, ತುಕ್ಬಾ, ದಮ್ಮಾಮ್, ಜುಬೈಲ್ ಮತ್ತು ಮುಝೈನ್ ಘಟಕದ ನಾಯಕರುಗಳಿಗೆ ಹಸ್ತಾಂತರಿಸಿದರು. ನಂತರ ಕ್ಷೇಮನಿಧಿ ಪ್ರಥಮ ಧನ ಸಹಾಯ ರೂಪಾಯಿ 2 ಲಕ್ಷ ಮೊತ್ತವನ್ನು ಆನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿರುವ ಸುನ್ನೀ ಸೆಂಟರ್ ದಮ್ಮಾಮ್ ಘಟಕದ ಸಕ್ರೀಯ ಕಾರ್ಯಕರ್ತ ಅಬ್ದುಲ್ ಅಝೀಝ್ ಕಂದಾವರ ರವರಿಗೆ ಹಾತೀಂ ಕಂಚೆಯವರು ಅವರ ಸಂಬಂಧಿಕ ಅನ್ಸಾರ್ ಕಾನರವರಿಗೆ ನೀಡಿದರು.
ಸುನ್ನೀ ಗೈಡೆನ್ಸ್ ಬ್ಯೂರೋ ಅಧ್ಯಕ್ಶ ಹಾಗೂ ಇಹ್ಸಾನ್ ಬನಾತ್ ಕೇರ್ ಪ್ರಾಂಶುಪಾಲ ಉಸ್ತಾದ್ ಮುಹಮ್ಮದ್  ಖಾಸಿಮಿ ಅಳಕೆಮಜಲು ರವರನ್ನು  ವಲಯಾಧ್ಯಕ್ಷ ಸುಲೈಮಾನ್ ಸೂರಿಂಜೆ, ಪ್ರ ಕಾರ್ಯದರ್ಶಿ  ಅಬೂಬಕ್ಕರ್ ಬರ್ವ ಮತ್ತು ಉಪಾಧ್ಯಕ್ಷ ಶೇಕ್ ಬಲ್ಕುಂಜೆಯವರು ಶಾಲು ಹೊದಿಸಿ ಮತ್ತು ಪವಿತ್ರ ಕುರ್ ಆನ್  ನೀಡಿ ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಖಾಸಿಮಿ ಉಸ್ತಾದರು ಪ್ರಸಕ್ತ ಸನ್ನಿವೇಶದಲ್ಲಿ ಇಸ್ಲಾಂ ಮತ್ತು ಸೈನ್ಸ್ ನಮಾಝ್ ಹಾಗೂ ದೈನಂದಿನ ಝಿಕ್ರ್ ಗಳ ಮಹತ್ವ  ಕುರಿತು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ವಲಯ ಸಮಿತಿಯ 7 ಘಟಕಗಳ ಮುಖಂಡರು ಕ್ಷೇಮನಿಧಿ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ DKSC ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ, ಹಫ್ರ್ ಲ್ ಬಾತಿನ್ ಉಪಾಧ್ಯಕ್ಷ ಮುಹಮ್ಮದ್ ಅಮ್ಮುಂಜೆ, ಹಿರಿಯರಾದ ಅನ್ವರ್ ಹುಸೈನ್ ಗೂಡಿನಬಳಿ, ಯುವ ಉದ್ಯಮಿ ಅಲ್ ಹಸ್ಸ ಉಪಾಧ್ಯಕ್ಷ ಸಿದ್ದೀಕ್ ಕಲ್ಲಡ್ಕ,  ಹಾಗೂ  ಹಲವಾರು ಸಂಘ ಸಂಸ್ಥೆಗಳ  ಮುಖಂಡರು ಉಪಸ್ಥಿತರಿದ್ದರು. ಕ್ಷೇಮನಿಧಿ ಅಧ್ಯಕ್ಷ ಜನಾಬ್ ಹಾತೀಂ ಕಂಚಿ ಎಲ್ಲರು ಒಮ್ಮತದೊಂದಿಗೆ ಕ್ಷೇಮನಿಧಿಯನ್ನು ಬಲಪಡಿಸಬೇಕು ಎಂದು ಸಲಹೆಯಿತ್ತರು. ಸಭಾಧ್ಯಕ್ಷರಾದ ಜನಾಬ್ ಸುಲೈಮಾನ್ ಸೂರಿಂಜೆ ವಲಯ ಸಮಿತಿಯ ಮುಖಾಂತರ 20 ಜೋಡಿ ನಡೆಯುವ ಸರಳವಿವಾಹದ ಯಶಸ್ವಿಗೆ ಆಯ ಘಟಕಗಳು ಸಂಪೂರ್ಣವಾಗಿ ತಮಗೆ ಕೊಟ್ಟ ಗುರಿಯನ್ನು ತಲುಪಿಸಬೇಕಾಗಿ ವಿನಂತಿಸಿದರು. 
ಕ್ಷೇಮನಿಧಿ ಪ್ರ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಕೊನೆಯಲ್ಲಿ ಅನ್ವರ್ ಹುಸೈನ್ ಗೂಡಿನಬಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News