ಅಬುಧಾಬಿ: ನಿರ್ಮಾಣಹಂತದ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ

Update: 2016-08-31 11:24 GMT

ಅಬುಧಾಬಿ,ಆಗಸ್ಟ್31: ಅಬುಧಾಬಿಯಲ್ಲಿ ನಿರ್ಮಾಣಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿಆಕಸ್ಮಿಕ ಸಂಭವಿಸಿದೆಯೆಂದು ವರದಿಯಾಗಿದೆ. ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಅಧಿಕ ಕಾರ್ಮಿಕರಿಗೆ ಮತ್ತು ಅವರ ರಕ್ಷಣೆಗೆ ಧಾವಿಸಿದ್ದ ರಕ್ಷಣಾಕಾರ್ಯಕರ್ತರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಅಗ್ನಿಹೊತ್ತಿಉರಿಯಲು ಕಾರಣವೇನೆಂದು ಬಹಿರಂಗವಾಗಿಲ್ಲ ಎಂದು ವರದಿ ತಿಳಿಸಿದೆ.

ಅಬುಧಾಬಿ ಮಾಲ್‌ಗೆ ಸಮೀಪದ ಅಲ್‌ರೀಂ ಹೈಲೆಂಡ್‌ನಲ್ಲಿನಿರ್ಮಾಣಗೊಳ್ಳುತ್ತಿದ್ದ 28 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಕಟ್ಟಡದಿಂದ ಭಾರೀಪ್ರಮಾಣದ ಹೊಗೆ ಹೊರಬಂದಿತ್ತು. ಅಬುಧಾಬಿ ಡಿಫೆನ್ಸ್ ಮತ್ತು ಕ್ಷಿಪ್ರ ರಕ್ಷಣಾ ಪಡೆ ಮತ್ತು ಪೊಲೀಸರು ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಬೆಂಕಿಹಿಡಿದದ್ದರಿಂದಾಗಿ ಈ ಪ್ರದೇಶದಲ್ಲಿ ವಾಹನಸಂಚಾರಕ್ಕೆ ಅಡ್ಡಿಯಾಗಿತ್ತು. ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮತ್ತು ಹತ್ತಿರದ ಕಟ್ಟಡದಲ್ಲಿದ್ದ ಜನರನ್ನು ತಂಡ ರಕ್ಷಿಸಿದೆ. ಸಿವಿಲ್‌ಡಿಫೆನ್ಸ್‌ನ ಅಗ್ನಿಶಾಮಕ ಇಂಜಿನ್‌ಗಳು ಮತ್ತುಹೆಲಿಕಾಪ್ಟರ್‌ಗಳು ಬೆಂಕಿ ಆರಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿತ್ತು. ಬೆಂಕಿಗೆ ಕಾರಣವೇನೆಂದು ತಪಾಸಣೆ ನಡೆಯುತ್ತಿದ್ದು, ನಿರ್ಮಾಣ ಕಾಮಗಾರಿನಡೆಯುವಲ್ಲಿ ಬೆಂಕಿ ಆರಿಸುವ ವ್ಯವಸ್ಥೆ ಮುಂತಾದ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಸಿವಿಲ್ ಡಿಫೆನ್ಸ್‌ನ ಮುಖ್ಯಸ್ಥ ಕರ್ನಲ್ ಮುಹಮ್ಮದ್ ಅಬ್ದುಲ್ ಜಲೀಲ್ ಅಲ್ ಅನ್ಸಾರಿ ಹೇಳಿದ್ದಾರೆ. ಸಮೀಪದ ಕಟ್ಟಡಗಳಿಗೆ ಬೆಂಕಿ ಹರಡದಂತೆ ರಕ್ಷಣಾ ತಂಡ ವ್ಯವಸ್ಥೆ ಮಾಡುತ್ತಿದೆ. ಕ್ಯೂ-7,ಟ್ರಾಫಿಕ್-ಪೆಟ್ರೋಲ್, ಆ್ಯಂಬುಲೆನ್ಸ್ ಸಿವಿಲ್ ಡಿಫೆನ್ಸ್‌ಗೆ ನೆರವಾಗುತ್ತಿದೆ. ಮುಂಜಾಗ್ರತೆಯ ಅಂಗವಾಗಿ ಸಮೀಪದ ಹೊಟೇಲ್‌ನಲ್ಲಿರುವವರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಬುಧಾಬಿಸರಕಾರದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಬೀಚ್ ರೋಟಾನ ಹೋಟೆಲ್ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News