ಅರಫಾ ದಿನ ಸೆ.11ಕ್ಕೆ, ಸೌದಿ ಅರೇಬಿಯದಯಲ್ಲಿ 12ಕ್ಕೆ ಬಕ್ರೀದ್
Update: 2016-09-02 11:35 IST
ಜಿದ್ದಾ,ಸೆ.2: ಸೌದಿಅರೇಬಿಯದಲ್ಲಿ ದುಲ್‌ಕಅದ್ 29 ಗುರುವಾರ ದುಲ್‌ಹಜ್ ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ಶನಿವಾರ ದುಲ್‌ಹಜ್ ಒಂದು ಆಗಲಿದೆ ಎಂದು ಸೌದಿಯ ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕಾರ ಅರಫಾದಿನ ಸೆಪ್ಟಂಬರ್ ಹನ್ನೊಂದು ರವಿವಾರ ಆಗಲಿದ್ದು ಬಕ್ರೀದ್ (ಈದುಲ್ ಅಝ್ ಹಾ) ಸೋಮವಾರ ಆಗಲಿದೆ ಎಂದು ವರದಿಯೊಂದು ತಿಳಿಸಿದೆ.
ಹಜ್ ಪ್ರಕ್ರಿಯೆಯ ಕರ್ಮಗಳು ಸೆಪ್ಟಂಬರ್ ಹತ್ತಕ್ಕೆ (ದುಲ್‌ಹಜ್ ಎಂಟು) ಆರಂಭವಾಗಿ ಸೆಪ್ಟಂಬರ್ ಹದಿನೈದಕ್ಕೆ(ದುಲ್‌ಹಜ್ 13ಕ್ಕೆ) ಕೊನೆಗೊಳ್ಳಲಿದೆ. ದುಲ್‌ಹಜ್ ಚಂದ್ರೋದಯವನ್ನು ವೀಕ್ಷಿಸಲು ಮತ್ತು ಅದರ ಮಾಹಿತಿಯನ್ನು ಒದಗಿಸಲು ದೇಶದ ಸಮಸ್ತ ಜನರೊಂದಿಗೆ ಸೌದಿ ಸುಪ್ರೀಂಕೋರ್ಟ್ ಸೂಚಿಸಿತ್ತು. ಸಾಮಾನ್ಯವಾಗಿ ಚಂದ್ರೋದಯ ದರ್ಶನದ ಯಾವುದೇ ಕೇಂದ್ರಗಳಿಂದ ಚಂದ್ರೋದಯವಾದ ಕುರಿತು ಮಾಹಿತಿ ಸಿಗದಿರುವ ಹಿನ್ನೆಲೆಯಲ್ಲಿ ಖಗೋಳ ವಿಜ್ಞಾನಿ ಡಾ.ಖಾಲಿದ್ ಅಲ್‌ಸಅಕ್‌ರನ್ನು ಉದ್ಧರಿಸಿ ಮಾಧ್ಯಮಗಳು ವರದಿಮಾಡಿವೆ ಎನ್ನಲಾಗಿದೆ.