×
Ad

ಯುಎಇ: ದಿವಾಳಿ ಘೋಷಿಸಿದರೆ 5 ವರ್ಷ ಜೈಲು, ಭಾರೀ ದಂಡ

Update: 2016-09-06 22:33 IST

ಅಬುಧಾಬಿ, ಸೆ. 6: ಫೆಡರಲ್ ದಿವಾಳಿ ಕಾನೂನಿನ ಅಂತಿಮ ಕರಡನ್ನು ಯುಎಇ ಹಣಕಾಸು ಸಚಿವಾಲಯ ಮಂಗಳವಾರ ನಡೆದ ಮಾಧ್ಯಮ ದುಂಡು ಮೇಜಿನ ಸಭೆಯಲ್ಲಿ ಪರಿಶೀಲನೆ ನಡೆಸಿತು. ಕಾನೂನಿಗೆ ಯುಎಇ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯೇದ್ ಅಲ್ ನಹ್ಯಾನ್ ಮತ್ತು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್‌ರ ಮಾರ್ಗದರ್ಶನದಂತೆ ಹಣಕಾಸು ವ್ಯವಹಾರಗಳ ಸಹಾಯಕ ಸಚಿವ ಉಬೈದ್ ಹುಮೈದ್ ಅಲ್ ತಾಯರ್ ಅಂತಿಮ ಕರಡಿನ ಪರಿಶೀಲನೆ ನಡೆಸಿದರು.
 ಈ ಕಾನೂನಿನ ಪ್ರಕಾರ, ಸಾಲಗಳನ್ನು ಮರುಪಾವತಿಸದೆ ದಿವಾಳಿ ಘೋಷಿಸಲು ಬಯಸುವವರು ಐದು ವರ್ಷಗಳ ಜೈಲುವಾಸಕ್ಕೆ ಗುರಿಯಾಗಬೇಕಾಗಬಹುದು ಹಾಗೂ 10 ಲಕ್ಷ ದಿರ್ಹಮ್‌ಗಳಷ್ಟು ದಂಡ ಪಾವತಿಸಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News