ಡಿ.9ರಂದು ದುಬೈಯಲ್ಲಿ ದಾರುನ್ನೂರ್ ಮೀಲಾದ್ ಸಮಾವೇಶ

Update: 2016-09-10 12:40 GMT

ದುಬೈ, ಸೆ.10: ಮೂಡುಬಿದಿರೆಯ ಕಾಶಿಪಟ್ಣದ ದಾರುನ್ನೂರ್ ಎಜುಕೇಷನ್ ಸೆಂಟರ್‌ನ ಅಧೀನದಲ್ಲಿ ಕಾರ್ಯಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ವತಿಯಿಂದ ಡಿ.9ರಂದು ದಾರುನ್ನೂರ್ ಮೀಲಾದ್ ಸಮಾವೇಶ ನಡೆಸುವ ಕುರಿತು ಶುಕ್ರವಾರ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಬ್ದುಸ್ಸಲಾಂ ಬಪ್ಪಳಿಗೆ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದಾಗುವ ಅಪಾಯದ ಕುರಿತು ವಿವರಿಸಿದರು. ದಾರುನ್ನೂರ್ ಯೂತ್ ಟೀಮ್ ವತಿಯಿಂದ ಬಕ್ರೀದ್ ಹಬ್ಬದ ದಿನದಂದು ನಡೆಯಲಿರುವ ಪ್ರವಾಸದ ಕುರಿತು ಚರ್ಚಿಸಲಾಯಿತು.

ಈ ಸಂದರ್ಭ 2016ನೆ ಸಾಲಿನ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಆತೂರು, ಉಪಾಧ್ಯಕ್ಷರಾಗಿ ಹಮೀದ್ ಮನಿಲ, ಕಾರ್ಯದರ್ಶಿಯಾಗಿ ಸಜ್ಜಾದ್ ಅಹ್ಮದ್ ಮೂಡುಬಿದಿರೆ, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಮಂಗಿಲಪದವು, ಕೋಶಾಧಿಕಾರಿಯಾಗಿ ಇಲ್ಯಾಸ್ ಕಡಬರನ್ನು ಆರಿಸಲಾಯಿತು.

ದಾರುನ್ನೂರ್ ಯುಎಇಯ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಆತೂರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿಯ ಮತ್ತು ಡಿವೈಟಿಯ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.

ಶಾಹುಲ್ ಬಿ.ಸಿ.ರೋಡ್ ದುಆ ನೆರವೇರಿಸಿದರು. ನವಾಝ್ ಬಿ.ಸಿ.ರೋಡ್ ಸ್ವಾಗತಿಸಿದರು. ನಾಸಿರ್ ಮಂಗಿಲಪದವು ವಂದಿಸಿದರು.

ವರದಿ: ಬದ್ರುದ್ದೀನ್ ಹೆಂತಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News