×
Ad

ಜಿದ್ದಾ: ಐಎಫ್‌ಎಫ್‌ನಿಂದ ಹಜ್ ಸ್ವಯಂಸೇವಾ ತರಬೇತಿ ಶಿಬಿರ

Update: 2016-09-10 19:48 IST

ಜಿದ್ದಾ, ಸೆ.10: ಇಂಡಿಯಾ ಫ್ರೆಟರ್ನಿಟಿ ಫಾರಂ (ಐಎಫ್‌ಎಫ್) ಜಿದ್ದಾ ಕರ್ನಾಟಕ ಘಟಕದ ವತಿಯಿಂದ ಹಜ್ ಯಾತ್ರಾರ್ಥಿಗಳ ಸೇವೆಗಾಗಿ ಸ್ವಯಂಸೇವಾ ತರಬೇತಿ ಶಿಬಿರವು ಶುಕ್ರವಾರ ಶರಫಿಯ್ಯಾ ಕಚೇರಿಯಲ್ಲಿ ನಡೆಯಿತು.

ಐಎಫ್‌ಎಫ್ ಕರ್ನಾಟಕ ಘಟಕದ ಹುಸೈನ್ ಜೋಕಟ್ಟೆ ಹಜ್ ಸೇವೆಯ ತರಬೇತಿ ಶಿಬಿರವನ್ನುದ್ದೇಶಿಸಿ ಮಾತನಾಡಿದರು. ಹಜ್ ಸೇವೆಗಾಗಿ ಐಎಫ್‌ಎಫ್ ಸಿದ್ಧಪಡಿಸಿದ ಮಕ್ಕಾ ಪ್ರಾದೇಶಿಕ ನಕ್ಷೆಯ ಮೂಲಕ ಹಜ್ ಸೇವೆಯ ಸಮಗ್ರ ಮಾಹಿತಿ ನೀಡಲಾಯಿತು.

ಅರಫಾ ಹಾಗೂ ಮೀನಾದ ಜಮ್ರಾ, ಮುಝ್ದಲಿಫಾ, ರೈಲ್ವೆ ನಿಲ್ದಾಣ, ವಸತಿ ಪ್ರದೇಶ(ಟೆಂಟ್), ಆರೋಗ್ಯ ಸೇವೆ ಮತ್ತು ಔಷಧಾಲಯಗಳಲ್ಲಿ ಸ್ವಯಂ ಸೇವಕರು ಹಜ್ಜಾಜಿಗಳಿಗೆ ನೆರವಾಗುವ ಕುರಿತು ವಿವರಿಸಲಾಯಿತು. ಈ ಬಾರಿ ಹಜ್ ಯಾತ್ರಿಕರಿಗೆ ತಮ್ಮ ಸ್ಥಳಗಳಿಗೆ ತಲುಪಲು ನೆರವಾಗುವುದಕ್ಕಾಗಿ ಐಎಫ್‌ಎಫ್ ಬಿಡುಗಡೆಗೊಳಿಸಿರುವ ಹಜ್ ನ್ಯಾವಿಗೇಟರ್ ಅಪ್ಲಿಕೇಶನ್‌ನ್ನು ಬಳಸುವ ವಿಧಾನಗಳನ್ನು ಈ ಸಂದರ್ಭ ಶಿಬಿರಾರ್ಥಿಗಳಿಗೆ ತಿಳಿಸಿ ಕೊಡಲಾಯಿತು.

ಶಿಬಿರದಲ್ಲಿ ಹಜ್ ಸ್ವಯಂ ಸೇವಾ ಸಂಯೋಜಕ ಮುದಸ್ಸಿರ್, ಸಹ ಸಂಯೋಜಕ ಇಸ್ಮಾಯೀಲ್ ಕಲ್ಲಡ್ಕ, ಐಎಫ್‌ಎಫ್ ಕರ್ನಾಟಕದ ಪಶ್ಚಿಮ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಜಿದ್ದಾ ಆಸುಪಾಸಿನ ಕರ್ನಾಟಕದ ಸುಮಾರು 40 ಮಂದಿ ಅನಿವಾಸಿ ಭಾರತೀಯರು ಭಾಗವಹಿಸಿದ್ದರು.

ವರದಿ: ಇಸ್ಮಾಯೀಲ್ ಕಲ್ಲಡ್ಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News