ಹಜ್ ಯಾತ್ರಿಕರ ಸೇವೆಗೆ ಮಕ್ಕಾಗೆ ತೆರಳಿದ ಕೆಸಿಎಫ್, ಎಚ್‌ವಿಸಿ ಸ್ವಯಂಸೇವಕರು

Update: 2016-09-12 03:54 GMT

ಮದೀನಾ, ಸೆ.12: ಪವಿತ್ರ ಹಜ್ ಕರ್ಮ ನಿರ್ವಹಿಸಲು ಬಂದಂತಹ ಯಾತ್ರಾರ್ಥಿಗಳಿಗೆ ಸಹಕರಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಾಗೂ ಆರ್‌ಎಸ್‌ಸಿ ವತಿಯಿಂದ ಸಿದ್ಧರಾಗಿರುವ 1,100ಕ್ಕೂ ಅಧಿಕ ಸ್ವಯಂ ಸೇವಕರು ಮಿನಾ, ಮುಝ್ದಲಿಫಕ್ಕೆ ಪ್ರಯಾಣ ಬೆಳೆಸಿದರು. ಸ್ವಯಂಸೇವಕರಾಗಿ ಸೇವೆಗೈಯಲು ಸಿದ್ಧರಾದ ಕೆಸಿಎಫ್ ಮದೀನಾ ಕಾರ್ಯಕರ್ತರು ಸೋಮವಾರ ಬೆಳಗ್ಗಿನ ಜಾವ ಮಕ್ಕಾ ಕಡೆ ಪ್ರಯಾಣ ಬೆಳೆಸಿದರು.

ಈ ಸಂದರ್ಭ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಕೆಸಿಎಫ್ ಸೌದಿ ಅರೇಬಿಯದ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ , ಗಲ್ಫ್ ರಾಷ್ಟ್ರದಲ್ಲಿಯೇ ಕೆಸಿಎಫ್ ಸಂಘಟನೆಯು ಅಹ್ಲ್ ಸುನ್ನತ್ ವಲ್ ಜಮಾತ್‌ನ ದೊಡ್ಡ ಸಂಘಟನೆಯಾಗಿರುವುದು ಸಂತಸದ ವಿಚಾರವಾಗಿದೆ.
ಮನುಷ್ಯರನ್ನು ವ್ಯಕ್ತಿ ಪರವಾಗಿ ಬದಲಾಯಿಸುವುದು ಕೆಸಿಎಫ್‌ನ ಧ್ಯೇಯವಾಗಿದ್ದು, ವ್ಯಕ್ತಿ ತಾನು ಉತ್ತಮನಾಗುವುದರೊಂದಿಗೆ ಇತರರನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ಇದನ್ನು ಕೆಸಿಎಫ್ ಕಲಿಸಿಕೊಡುತ್ತದೆ ಎಂದರು.

ಈ ವೇಳೆ ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ, ಉಸ್ಮಾನ್ ಮಾಸ್ಟರ್, ಅಬ್ದುಸ್ಸಮದ್ ಪೊನ್ನಂಪೇಟೆ, ರಝಾಕ್ ಉಳ್ಳಾಲ್, ತಾಜುದ್ದೀನ್ ಸುಳ್ಯ ಹಾಗೂ ಯಾಂಬೋ, ತಬೂಕ್ ಸೆಕ್ಟರ್‌ನ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News