ಮಾಜಿ ಮೆಕ್ಯಾನಿಕ್ ಈಗ ಪ್ರತಿಷ್ಠಿತ ಬುರ್ಜ್ ಖಲೀಫಾದಲ್ಲಿ 22 ಅಪಾರ್ಟ್ ಮೆಂಟುಗಳ ಒಡೆಯ !

Update: 2016-09-12 06:41 GMT

ದುಬೈ : ಒಂದೊಮ್ಮೆ ಮೆಕ್ಯಾನಿಕ್ ಆಗಿದ್ದ ಹಾಗೂ ಈಗ ಓರ್ವ ಯಶಸ್ವಿ ಉದ್ಯಮಿಯಾಗಿರುವ ಅನಿವಾಸಿ ಭಾರತೀಯ ಜಾರ್ಜ್ವಿ ನೆರಿಯಪರ್ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬರೋಬ್ಬರಿ 22 ವಿಲಾಸಿ ಅಪಾರ್ಟ್ ಮೆಂಟುಗಳನ್ನು ಖರೀದಿಸಿದ್ದಾರೆ.ಕೇರಳ ಮೂಲದ ಜಾರ್ಜ್ ಈ ಮೂಲಕ ಬುರ್ಜ್ ಖಲೀಫಾದಲ್ಲಿ ಬಹಳಷ್ಟು ಸೊತ್ತು ಖರೀದಿಸಿದವರಲ್ಲಿ ಮೊದಲಿಗರಾಗಿದ್ದಾರೆ.

 ತಾನು ಇಷ್ಟಕ್ಕೇ ನಿಲ್ಲಿಸುವುದಿಲ್ಲ. ಬದಲಾಗಿ ಉತ್ತಮ ದರಗಳಿಗೆ ದೊರೆತರೆ ಮತ್ತಷ್ಟು ಅಪಾರ್ಟ್ ಮೆಂಟುಗಳನ್ನು ಖರೀದಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ‘‘ನಾನೊಬ್ಬ ಕನಸುಗಾರ ಹಾಗೂ ಕನಸು ಕಾಣುವುದನ್ನು ನಿಲ್ಲಿಸುವುದಿಲ್ಲ’’ ಎಂದು ಖಲೀಜ್ ಹೆಮ್ಮೆಯಿಂದ ನುಡಿಯುತ್ತಾರೆ.

ಅವರ ಸಂಬಂಧಿಯೊಬ್ಬರು ಬುರ್ಜ್ ಖಲೀಫಾವನ್ನು ತೋರಿಸಿ ‘‘ನೀವು ಇದನ್ನು ಪ್ರವೇಶಿಸಲು ಸಾಧ್ಯವಿಲ್ಲ’’ಎಂದು ತನ್ನನ್ನು ವ್ಯಂಗ್ಯವಾಡಿದ್ದೇ ತಾನು ಇಲ್ಲಿ ಅಪಾರ್ಟ್ ಮೆಂಟುಗಳನ್ನು ಖರೀದಿಸಲು ಕಾರಣವೆಂದು ಅವರು ಹೇಳುತ್ತಾರೆ.
2010 ರಲ್ಲಿ ಬುರ್ಜ್ ಖಲೀಫಾದಲ್ಲಿ ಅಪಾರ್ಟ್ ಮೆಂಟ್ ಒಂದು ಬಾಡಿಗೆಗಿದೆಯೆಂದು ಜಾಹೀರಾತು ಮೂಲಕ ತಿಳಿದುಕೊಂಡ ಅವರು ಅಲ್ಲಿ ವಾಸಿಸಲಾರಂಭಿಸಿ ಮುಂದಿನ ಆರು ವರ್ಷಗಳಲ್ಲಿ ಆ ಕಟ್ಟಡದಲ್ಲಿರುವ ಒಟ್ಟು 900 ಅಪಾರ್ಟ್ ಮೆಂಟುಗಳಲ್ಲಿ 22 ಅಪಾರ್ಟ್ ಮೆಂಟುಗಳನ್ನು ಖರೀದಿಸಿದ್ದರು. ಈಗ ಅವರ ಬಳಿಯಿರುವ ಅಪಾರ್ಟ್ ಮೆಂಟುಗಳಲ್ಲಿ ಆರನ್ನು ಬಾಡಿಗೆಗೆ ನೀಡಲಾಗಿದ್ದು ಉಳಿದವುಗಳಿಗಾಗಿ ಸೂಕ್ತ ಬಾಡಿಗೆದಾರರನ್ನು ಹುಡುಕಲಾಗುತ್ತಿದೆ.
ಸಣ್ಣ ಪ್ರಾಯದಲ್ಲಿ ತನ್ನ ತಂದೆಗೆ ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದ ಅವರು ರೈತರು ಬಿಸಾಡಿದಂತಹ ಹತ್ತಿ ಬೀಜಗಳನ್ನು ಹೆಕ್ಕಿ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಈಗ ಅವರು ಜಿಇಒ ಗ್ರೂಪ್ ಆಫ್ ಕಂಪೆನಿಯನ್ನು ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News