×
Ad

ಐಎಫ್‌ಎಫ್‌ನ ಸ್ವಯಂಸೇವಕರಿಂದ ಹಜ್ ಯಾತ್ರಿಕರ ಸೇವೆ

Update: 2016-09-13 11:09 IST

ಮಕ್ಕಾ, ಸೆ.13: : ಇಂಡಿಯಾ ಫ್ರೆಟರ್ನಿಟಿ ಫಾರಂ ವತಿಯಿಂದ ಸುಮಾರು 800 ಸ್ವಯಂ ಸೇವಕರು ಪವಿತ್ರ ಹಜ್ ಕರ್ಮ ನಿರ್ವಹಿಸಲು ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹಜ್ ಯಾತ್ರಾರ್ಥಿಗಳಿಗೆ ನೆರವಾದರು. ಇಂಗ್ಲೀಷ್, ಅರೇಬಿಕ್ ಹಾಗೂ ವಿವಿಧ ಸ್ಥಳೀಯ ಭಾಷೆಗಳನ್ನು ಬಲ್ಲ ಸ್ವಯಂ ಸೇವಕರ ಸೇವೆಯನ್ನು ಏಷ್ಯಾ ಹಾಗೂ ಇತರ ಭಾಗಗಳಿಂದ ಬಂದ ಹಜ್ಜ್ ಯಾತ್ರಾರ್ಥಿಗಳು ಶ್ಲಾಘಿಸಿದರು.

ಸ್ವಯಂ ಸೇವೆಯ ಭಾಗವಾಗಿ ಐಎಫ್‌ಎಫ್ ಅರಫಾ ಮತ್ತು ಮೀನಾಗಳ ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿತ್ತು. ಯಾತ್ರಿಗಳು ರೈಲ್ವೆ ನಿಲ್ದಾಣವನ್ನು ತಲುಪುವುದಕ್ಕೆ ಮುಂಚಿತವಾಗಿ ತಲುಪಿದ ಸ್ವಯಂ ಸೇವಕರು ಅರಫಾ ತಲುಪುವ ಹಜ್ ಯಾತ್ರಿಕರಿಗೆ ಇಲ್ಲಿ ತಮ್ಮ ಟೆಂಟ್‌ಗಳನ್ನು ಪತ್ತೆಹಚ್ಚಲು ನೆರವಾದರು.

ವಯಸ್ಕರು ಮತ್ತು ಅನಾರೋಗ್ಯ ಪೀಡಿತ ಯಾತ್ರಿಕರಿಗೆ ಸ್ವಯಂ ಸೇವಕರು ಗಾಲಿ ಕುರ್ಚಿಗಳನ್ನು ಒದಗಿಸಿಕೊಟ್ಟು ಸುಸೂತ್ರವಾಗಿ ಅರಫಾ ಕರ್ಮ ನಿರ್ವಹಿಸಲು ಸಹಕರಿಸಿದರು. ಸ್ವಯಂ ಸೇವಕರು ಹಜ್‌ಯಾತ್ರಿಕರಿಗೆ ಹಜ್‌ನ ಭಾಗವಾದ ಕಲ್ಲೆಸೆಯುವ ಕರ್ಮವನ್ನು ನಿರ್ವಹಿಸಲು ಜಮ್ರಾಗೆ ತೆರಳುವ ಹಾಗೂ ಮರಳಿ ವಸತಿ ತಲುಪಲು ಸಹಕರಿಸಿದರು. ಮೀನಾದಲ್ಲಿ ಸುಮಾರು 500 ಸ್ವಯಂ ಸೇವಕರು ಸೇವೆಯಲ್ಲಿ ನಿರತರಾಗಿದ್ದರು.

ವರದಿ: ಇಸ್ಮಾಯೀಲ್ ಕಲ್ಲಡ್ಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News